ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಅ.15ರೊಳಗೆ KSRTCಯಿಂದ ರಾಜ್ಯದಲ್ಲಿ ಮೊದಲ ಹಂತದ ಪ್ರಾಯೋಗಿಕ ಇ-ಬಸ್ ಸಂಚಾರ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಅ.15ರೊಳಗೆ ಮೊದಲ ಹಂತದ ಪ್ರಾಯೋಗಿಕ ಇ-ಬಸ್‌ಗಳು ಸಂಚಾರ ನಡೆಸಲಿದೆ. ಒಂದು ತಿಂಗಳೊಳಗೆ 50 ಇ-ಬಸ್‌ಗಳು ರಸ್ತೆಗಳಿಯಲಿವೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಎಂ. ಚಂದ್ರಪ್ಪ ಹೇಳಿದ್ದಾರೆ.

ನಗರದ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದ ಆವರಣದಲ್ಲಿರುವ ಡಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಇನ್ನೂ 300 ಇಲೆಕ್ಟ್ರಿಕ್ ಬಸ್‌ಗಳ ಖರೀದಿಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ‌. ಅದಕ್ಕೂ ಪರವಾನಿಗೆ ದೊರೆತಲ್ಲಿ ಒಟ್ಟು 350 ಇ-ಬಸ್‌ಗಳು ಸಂಚಾರ ನಡೆಸಲಿದೆ ಎಂದರು.

ಮಂಗಳೂರು ವಿಭಾಗಿಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ಮಾತನಾಡಿ, ದಸರಾ ಹಬ್ಬದ ಸಂದರ್ಭದಲ್ಲಿ ಕೆಎಸ್ಆರ್ ಟಿಸಿಯ ದೇವಸ್ಥಾನದ ವಿಶೇಷ ಪ್ಯಾಕೇಜ್‌ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ದೀಪಾವಳಿಯ ಸಂದರ್ಭದಲ್ಲಿ ಅ.21 -27 ಮತ್ತೊಂದು ಪ್ಯಾಕೇಜ್ ಮಾಡಲಾಗುತ್ತದೆ. ಜನರ ಡಿಮಾಂಡ್ ಮೇಲೆ ಬಸ್‌ಗಳನ್ನು ವ್ಯವಸ್ಥೆ ಮಾಡಲಾಗುತ್ತದೆ. ಉಡುಪಿಯಲ್ಲೂ ಪ್ಯಾಕೇಜ್ ಟೂರ್ ಮುಂದುವರಿಯಲಿದೆ ಅದೇ ರೀತಿ ಕುಂದಾಪುರದಲ್ಲಿ ಹೊಸದಾಗಿ ಪ್ಯಾಕೇಜ್ ಟೂರ್ ಮಾಡಲಾಗುತ್ತಿದೆ. ವೀಕ್ ಎಂಡ್ ಪ್ಯಾಕೇಜ್ ಟೂರ್ ಬಗ್ಗೆಯೂ ಚಿಂತನೆಯಿದೆ. ಪ್ರೇಕ್ಷಣೀಯ ಸ್ಥಳಗಳ ಬಗ್ಗೆ, ಎಷ್ಟು ಬಸ್‌ಗಳನ್ನು ಮೊದಲ ಹಂತದಲ್ಲಿ ಬಿಡಲಾಗುತ್ತದೆ ಎಂಬುದನ್ನು ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುತ್ತದೆ ಎಂದರು.

Edited By :
PublicNext

PublicNext

11/10/2022 04:18 pm

Cinque Terre

21.4 K

Cinque Terre

1

ಸಂಬಂಧಿತ ಸುದ್ದಿ