ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: ನಿಡ್ಡೋಡಿಯಲ್ಲಿ ಮತ್ತೆ ಅನಧಿಕೃತ ಸರ್ವೆಗೆ ಯತ್ನ: ಹಿಮ್ಮೆಟ್ಟಿಸಿದ ಗ್ರಾಮಸ್ಥರು

ಮೂಡುಬಿದಿರೆ: ಪಡುಬಿದ್ರಿ ಯುಪಿಸಿಎಲ್ ನಿಂದ ಕೇರಳಕ್ಕೆ ವಿದ್ಯುತ್ ಪ್ರಸರಣಕ್ಕಾಗಿ ಸರ್ವೇ ನಡೆಸಲಾಗುತ್ತಿದೆ ಎಂದು ಹೇಳಿಕೊಂಡು ಅನಧಿಕೃತವಾಗಿ ನಿಡ್ಡೋಡಿ ಪರಿಸರದಲ್ಲಿ ಸರ್ವೇ ಕಾರ್ಯಕ್ಕಾಗಿ ಆಗಮಿಸಿದ ವ್ಯಕ್ತಿಗಳನ್ನು ಮಾತೃಭೂಮಿ ಸಂರಕ್ಷಣಾ ಸಮಿತಿ ಸೇರಿದಂತೆ ಗ್ರಾಮಸ್ಥರು ಹಿಮ್ಮೆಟ್ಟಿಸಿದ ಘಟನೆ ಶುಕ್ರವಾರ ನಡೆದಿದೆ.

ಜಿಲ್ಲಾಡಳಿತವಾಗಲೀ ಸ್ಥಳೀಯಾಡಳಿತದಿಂದಾಗಲೀ ಯಾವುದೇ ಪರವಾನಿಗೆ ಪಡೆಯದೇ ಸರ್ವೇ ನಡೆಸಲು ಆಗಮಿಸಿದ್ದರು. ಈ ಕುರಿತು ಸ್ಥಳೀಯರು ವಿಚಾರಿಸಿದಾಗ ಸಮರ್ಪಕ ಮಾಹಿತಿ ನೀಡಲು ವಿಫಲರಾದರು. ಅದರಿಂದ ಕುಪಿತರಾದ ಗ್ರಾಮಸ್ಥರು ಸರ್ವೇಗೆಂದು ಆಗಮಿಸಿದ್ದವರನ್ನು ತಡೆದು ಹಿಮ್ಮೆಟ್ಟಿಸಿದರು.

ಈ ಸಂದರ್ಭದಲ್ಲಿ ಮಾತೃಭೂಮಿ ಸಂರಕ್ಷಣಾ ಸಮಿತಿ ಅಧ್ಯಕ್ಷ ಅಲ್ಫೋನ್ಸ್ ಡಿ'ಸೋಜ, ಸಂಚಾಲಕ ಕಿರಣ್ ಮಂಜನಬೈಲು, ಸಮಿತಿ ಸದಸ್ಯರಾದ ಅರುಣ್ ಭಟ್, ರಾಮ ಗೌಡ ಮೊದಲಾದವರಿದ್ದರು.

Edited By : Manjunath H D
PublicNext

PublicNext

07/10/2022 05:56 pm

Cinque Terre

31.21 K

Cinque Terre

1

ಸಂಬಂಧಿತ ಸುದ್ದಿ