ಗ್ರಾಮದ ಪ್ರಗತಿಗಾಗಿ ಮತ್ತು ಶಿಕ್ಷಣ, ಆರೋಗ್ಯ, ಮಹಿಳೆ, ಮಕ್ಕಳ ಕುರಿತಂತೆ ಸಮಗ್ರವಾಗಿ 5 ವರ್ಷದ ಯೋಜನೆಯನ್ನು ರೂಪಿಸುವ ಹಿನ್ನೆಲೆಯಲ್ಲಿ ದೂರದೃಷ್ಟಿ ಯೋಜನೆ ಬ್ರಹ್ಮಾವರ ತಾಲೂಕು ವ್ಯಾಪ್ತಿಯ 27 ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ ಮತ್ತು ಪಂಚಾಯತಿ ಸದಸ್ಯರಿಗೆ ತರಬೇತಿ ಬುಧವಾರ ವಾರಂಬಳ್ಳಿ ಗ್ರಾಮ ಪಂಚಾಯತಿಯ ಸಭಾಂಗಣದಲ್ಲಿ ಆರಂಭಗೊಂಡಿತು.
ಮೈಸೂರಿನ ಅಬ್ದುಲ್ ನಝೀರ್ ಗ್ರಾಮೀಣಾಭಿವೃದ್ಧಿ ತರಬೇತಿ ಸಂಸ್ಥೆಯಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ನಡೆದ ಶಿಬಿರಕ್ಕೆ ಹನೆಹಳ್ಳಿ, ಕಾಡೂರು ಮತ್ತು ಕರ್ಜೆ ಗ್ರಾಮ ಪಂಚಾಯತಿಯಿಂದ ಒಟ್ಟು 40 ಮಂದಿ ಆಗಮಿಸಿದ್ದರು. ಆರಂಭದಲ್ಲಿ ಅಂತರ್ಜಾಲದಲ್ಲಿ ಪಂಚಾಯತ್ ರಾಜ್ ಇಲಾಖೆಯ ಲಕ್ಷ್ಮೀ ಪ್ರಿಯಾ, ಉಮಾ ಮಹದೇವನ್, ಎಲ್ ಕೆ ಅತೀಕ್, ಪ್ರಮೋದ್ ಹೆಗ್ಡೆ ಅವರಿಂದ ಆಶಯ ನುಡಿಯೊಂದಿಗೆ ಜರುಗಿತು.
ತರಬೇತಿಯ ಸುಗಮಗಾರರಾದ ಸುಮಂಗಲ ಮತ್ತು ಅನಿತಾರಿಂದ 3 ಗ್ರಾಮ ಪಂಚಾಯತಿಗೆ, 3 ದಿನದ ತರಬೇತಿಯಂತೆ 12 ತರಬೇತಿ ಕ್ಲಾಸ್ ನಡೆಯಲಿದೆ. ಬ್ರಹ್ಮಾವರ ತಾಲೂಕು ಪಂಚಾಯತಿ ಕಾರ್ಯ ನಿರ್ವಣಾಧಿಕಾರಿ ಎಚ್ ಇಬ್ರಾಹಿಂಪುರ್, ಯೋಜನಾಧಿಕಾರಿ ಸಂದೇಶ್, ಸಹಾಯಕ ನಿರ್ದೇಶಕ ಮಹೇಶ್ ಉಪಸ್ಥಿತರಿದ್ದರು.
Kshetra Samachara
21/09/2022 07:05 pm