ಕಾಪು : ಕರ್ನಾಟಕ ಸರಕಾರ ಕುಕ್ಕುಟ ಮಹಾಮಂಡಳಿ ಬೆಂಗಳೂರು ಇವರ ವತಿಯಿಂದ ಪಶು ಸಂಗೋಪನಾ ಇಲಾಖೆಯ ಸಹಯೋಗದೊಂದಿಗೆ ಬಿಪಿಎಲ್ ಕಾರ್ಡ್ ಹೊಂದಿರುವ ಗ್ರಾಮೀಣ ರೈತ ಮಹಿಳೆಯರಿಗೆ ನಾಟಿ ಕೋಳಿ ವಿತರಿಸುವ ಕಾರ್ಯಕ್ರಮವು ಕಾಪು ಪಶು ಆಸ್ಪತ್ರೆಯಲ್ಲಿ ನಡೆಯಿತು.
ಕಾಪು ತಾಲೂಕು ಪಶು ವೈದ್ಯಾಧಿಕಾರಿ ಡಾ. ಅರುಣ್ ಹೆಗ್ಡೆ ಮಾತನಾಡಿ, ಕಾಪು ತಾಲೂಕಿನ 106 ಮಂದಿ ಫಲಾನುಭವಿಗಳಿಗೆ ತಲಾ 20 ರಂತೆ ನಾಟಿ ಕೋಳಿ ವಿತರಿಸಲಾಗುತ್ತಿದೆ. ಈ ಯೋಜನೆಯ ಮೂಲಕವಾಗಿ ಗ್ರಾಮೀಣ ರೈತ ಮಹಿಳೆಯರನ್ನು ಆರ್ಥಿಕವಾಗಿ ಬಲವಪಡಿಸುವ ಉದ್ದೇಶ ಹೊಂದಲಾಗಿದೆ ಎಂದರು.
ಕರ್ನಾಟಕ ಕುಕ್ಕುಟ ಮಹಾಮಂಡಳಿಯ ಜಾನುವಾರು ಅಧಿಕಾರಿ ಅನಿಲ್ ಕುಮಾರ್ ಮಾತನಾಡಿ, ರಾಜ್ಯದಲ್ಲಿ ಸುಮಾರು 25,000 ಗ್ರಾಮೀಣ ರೈತ ಮಹಿಳೆಯರಿಗೆ 5 ಲಕ್ಷ ನಾಟಿ ಕೋಳಿ ಮರಿಗಳನ್ನು ನೀಡಲಾಗುತ್ತಿದೆ. ಈ ಯೋಜನೆಯಡಿ ಪ್ರತೀ ತಾಲೂಕಿನ 106 ಫಲಾನುಭವಿಗಳಿಗೆ ಕೋಳಿ ಮರಿ ವಿತರಿಸಲಾಗುತ್ತಿದೆ ಎಂದರು.
Kshetra Samachara
20/09/2022 02:19 pm