ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಮನಪಾದಿಂದ ಇ-ಆಸ್ತಿ ತಂತ್ರಾಂಶ ಅನುಷ್ಠಾನ

ಮಂಗಳೂರು: ಜನಸಾಮಾನ್ಯರಿಗೆ ತಂತ್ರಾಂಶದ ಮೂಲಕ‌ ಖಾತಾ ನೀಡುವಲ್ಲಿ ವಿಳಂಬವಾಗುತ್ತಿರುವ ಸಮಸ್ಯೆಗಳನ್ನು ಸುಗಮವಾಗಿ ಬಗೆಹರಿಸಲು ಮಂಗಳೂರು ‌ಮನಪಾ ಇ-ಆಸ್ತಿ ತಂತ್ರಾಂಶವನ್ನು ಇಂದು ಅನುಷ್ಠಾನಗೊಳಿಸಲಾಯಿತು.

ಮಂಗಳೂರು ಮನಪಾ ಆಯುಕ್ತ ಅಕ್ಷಯ್ ಶ್ರೀಧರ್ ಮಾತನಾಡಿ, ಇ - ಆಸ್ತಿ‌ ತಂತ್ರಾಶವು ಬಳಕೆದಾರ ಸ್ನೇಹಿಯಾಗಿದ್ದು, ಅರ್ಜಿದಾರರು ತಮ್ಮ ಆ್ಯಂಡ್ರಾಯ್ಡ್ ಮೊಬೈಲ್ ಮೂಲಕ‌ ಈ ತಂತ್ರಾಂಶದಲ್ಲಿ ಅಳವಡಿಸಲಾಗಿರುವ ಅರ್ಜಿಯೊಂದಿಗೆ ಸುಲಭವಾಗಿ ತಮ್ಮ ಜಾಗದ ಆಸ್ತಿಗೆ ಸಂಬಂಧಿಸಿದ ಮಾಹಿತಿಯನ್ನು ಅಪ್ಲೋಡ್ ಮಾಡಿ ಖಾತಾವನ್ನು ಪಡೆಯಬಹುದು.

ಇ- ಆಸ್ತಿ ಸಾಫ್ಟ್‌ವೇರ್ ತಂತ್ರಾಂಶವು ಆ್ಯಪ್ ಮುಖೇನ ಸಿದ್ಧಪಡಿಸಲಾಗಿರುವ ಮಾಹಿತಿಯನ್ನು ಮಂಗಳೂರು ಸೇವಾ ಕೇಂದ್ರಗಳಿಗೆ ಸಲ್ಲಿಸಿ ಖಾತೆಯನ್ನು ಪಡೆಯಬಹುದು. ಸಾರ್ವಜನಿಕರು ಅನವಶ್ಯಕವಾಗಿ ಕಾಯಲು‌ ಅವಕಾಶ ಕೊಡದೆ ತ್ವರಿತ ಹಾಗೂ ಸುಗಮವಾಗಿ ಸೇವೆಯನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಸ್ಕ್ಯಾನ್ ಮಾಡಿರುವ ಎಲ್ಲಾ ಅರ್ಜಿಗಳನ್ನು ಸಿಸ್ಟಮ್‌ನಲ್ಲಿ‌ ಅಳವಡಿಸಿದ ಬಳಿಕ ನೇರವಾಗಿ ಮಂಗಳೂರು ಸೇವಾ ಕೇಂದ್ರದ ಮೂಲಕ ಸ್ವೀಕೃತವಾಗಲಿದೆ. ಆ ಬಳಿಕ ಸ್ವಯಂಚಾಲಿತವಾಗಿ ಮಂಗಳೂರು ಮನಪಾ ಸಂಬಂಧಿಸಿದ ಶಾಖೆಗೆ ತಲುಪಿ ನಿಗದಿತ ಸಮಯದೊಳಗೆ ಇ- ಆಸ್ತಿ ಪ್ರಕ್ರಿಯೆ ಇತ್ಯರ್ಥವಾಗಲಿದೆ. ಅರ್ಜಿದಾರರು ಅನುಮೋದಿತ ಇ - ಖಾತಾವನ್ನು ಮಂಗಳೂರು ಸೇವಾ ಕೇಂದ್ರದ ಪೋರ್ಟಲ್ ನಿಂದ ಡೌನ್ಲೋಡ್ ಮಾಡಬಹುದು ಎಂದು ಹೇಳಿದರು.

Edited By : Manjunath H D
Kshetra Samachara

Kshetra Samachara

07/09/2022 08:17 pm

Cinque Terre

3.51 K

Cinque Terre

0

ಸಂಬಂಧಿತ ಸುದ್ದಿ