ಉಡುಪಿ: ರಾಜ್ಯದ ಬಡತನ ರೇಖೆಗಿಂತ ಕೆಳಗಿರುವ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮಾಸಿಕ 75 ಯೂನಿಟ್‌ವರೆಗೆ ಉಚಿತ ವಿದ್ಯುತ್ ಒದಗಿಸುವ ಸಂಬಂಧ ಹೊರಡಿಸಲಾಗಿದ್ದ ಆದೇಶವನ್ನು ಸರ್ಕಾರ ಹಿಂಪಡೆದಿದೆ.
ಯೋಜನೆಗೆ ಸಂಬಂಧಿಸಿ ಕೆಲವು ನಿಯಮಗಳನ್ನು ಪರಿಷ್ಕರಿಸುವ ಉದ್ದೇಶದಿಂದ ಆಗಸ್ಟ್ 24ರಂದು ಹೊರಡಿಸಿದ್ದ ಸುತ್ತೋಲೆಯನ್ನು ಮಾತ್ರ ಹಿಂಪಡೆಯಲಾಗಿದೆ ಎಂದು ಸರ್ಕಾರ ಹೇಳಿದೆ. ಈ ಬಗ್ಗೆ ಪಬ್ಲಿಕ್ ನೆಕ್ಸ್ಟ್‌ಗೆ ಪ್ರತಿಕ್ರಿಯೆ ನೀಡಿರುವ ಉಡುಪಿಯ ದಲಿತ ಮುಖಂಡ ಸುಂದರ್ ಮಾಸ್ತರ್, ಎಸ್‌ಸಿ, ಎಸ್‌ಟಿಗಳಿಗೆ ಘೋಷಣೆ ಮಾಡಿದ್ದ ಸಣ್ಣ ಯೋಜನೆ ಇದು. ಇದನ್ನೂ ಸರ್ಕಾರ ಹಿಂಪಡೆಯುತ್ತದೆ ಎಂದರೆ ಸರಕಾರ ನಮಗೆ ಮಾಡಿದ ಅನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಲವು ದಿನಗಳ ಹಿಂದೆ ಈ ಆದೇಶ ಹೊರಡಿಸುವಾಗ ಸರಕಾರ ನಮ್ಮ ಪರವಾಗಿ ಇದೆ ಎಂದುಕೊಂಡಿದ್ದೆವು. ಆದರೆ ಈಗ ಸರ್ಕಾರದ ಪೇಜಾಟ ನೋಡಲಾಗುತ್ತಿಲ್ಲ.ಇದು ಸರ್ಕಾರ ಬಡವರಿಗೆ ಮಾಡುತ್ತಿರುವ ಮೋಸ. ಕೇವಲ 250 ರೂ.ಗಳ ಉಪಕಾರ ಈ ಯೋಜನೆಯಿಂದ ಆಗುತ್ತಿತ್ತು.ಹೆಚ್ಚೇನೂ ಅಲ್ಲ.ಆದರೆ ಇದನ್ನೂ ವಾಪಾಸ್ ಪಡೆಯುತ್ತಿದ್ದಾತೆಂದರೆ ಇಂತಹ ಕೆಟ್ಟ ಸರ್ಕಾರವನ್ನು ನನ್ನ 63 ವರ್ಷಗಳ ಜೀವನದಲ್ಲಿ ನೋಡಲೇ ಇಲ್ಲ. ಎಸ್‌ಸಿ ಎಸ್‌ಟಿಗಳಿಗೆ ಅದು ಮಾಡುತ್ತೇವೆ ಇದು ಮಾಡುತ್ತೇವೆ ಎಂದು ಪ್ರಚಾರ ಪಡೆದುಕೊಳ್ಳುವ ಸರ್ಕಾರದ ಬೂಟಾಟಿಕೆ ಎನ್ನದೆ ಬೇರೆ ದಾರಿಯಲ್ಲ ಎಂದು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.
Kshetra Samachara
05/09/2022 05:43 pm