ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಶಾಸಕರಿಂದ ವಿಕಲಚೇತನರಿಗೆ ಟ್ರೈಸ್ಕೂಟರ್, ವೀಲ್ ಚೇರ್ ವಿತರಣೆ

ಉಡುಪಿ: 2021-22ನೇ ಸಾಲಿನ ನಗರಸಭಾ ಅನುದಾನದ ಶೇ 5ರ ನಿಧಿಯಡಿ 75 ಶೇಕಡಕ್ಕಿಂತ ಹೆಚ್ಚಿನ ವಿಕಲಚೇತನರಿಗೆ ಟ್ರೈಸ್ಕೂಟರ್ ಹಾಗೂ ವೀಲ್ ಚೇರ್ ಗಳನ್ನು ಇಂದು ನಗರಸಭೆಯಲ್ಲಿ ಶಾಸಕ ಕೆ. ರಘುಪತಿ ಭಟ್ ಫಲಾನುಭವಿಗೆ ವಿತರಿಸಿದರು.

ಸೆಟ್ಟಿಬೆಟ್ಟು ವಾರ್ಡಿನ ರಾಘವೇಂದ್ರ ನಾಯ್ಕ್ ಬಿನ್ ನಾರಾಯಣ ನಾಯ್ಕ್, ಪೆರಂಪಳ್ಳಿ ವಾರ್ಡಿನ ಅರೆಲ್ ಡಿಸೋಜಾ ಬಿನ್ ಆಲ್ಬರ್ಟ್ ಡಿಸೋಜಾ, ಒಳಕಾಡು ವಾರ್ಡಿನ ಬಿ.ಎಸ್ ಸುರೇಶ ಬಿನ್ ಎಸ್.ವಿ ನರಸಿಂಹ ಭಟ್ ಅವರಿಗೆ ಟ್ರೈಸ್ಕೂಟರ್ ಹಾಗೂ ಕಸ್ತೂರ್ಬಾ ನಗರ ವಾರ್ಡಿನ ಭಾಸ್ಕರ ಪೂಜಾರಿ ಅವರಿಗೆ ವೀಲ್ ಚೇರ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಉಡುಪಿ ನಗರ ಸಭೆಯ ಅಧ್ಯಕ್ಷರಾದ ಸುಮಿತ್ರಾ ಆರ್ ನಾಯಕ್, ಉಪಾಧ್ಯಕ್ಷರಾದ ಲಕ್ಷ್ಮೀ ಮಂಜುನಾಥ ಕೊಳ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ, ಪೌರಾಯುಕ್ತರಾದ ಉದಯ್ ಶೆಟ್ಟಿ ಹಾಗೂ ನಗರ ಸಭೆಯ ಸರ್ವ ಸದಸ್ಯರು, ನಾಮ ನಿರ್ದೇಶಿತ ಸದಸ್ಯರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

30/08/2022 12:38 pm

Cinque Terre

2.71 K

Cinque Terre

1

ಸಂಬಂಧಿತ ಸುದ್ದಿ