ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಕಳ ತಾಲೂಕು ಕಚೇರಿ ಕ್ಯಾಂಟೀನ್ ಟೆಂಡರ್‌ಗೆ ಮೀನಮೇಷ: ಹೋಟೆಲ್ ಆರಂಭಕ್ಕೆ ಗ್ರಹಣ

ಕಾರ್ಕಳ: ಕಾರ್ಕಳ ತಾಲೂಕು ಕಚೇರಿಯ ಆವರಣದಲ್ಲಿರುವ ಕ್ಯಾಂಟೀನ್ ಆರಂಭಕ್ಕೆ ತಾಲೂಕ ಆಡಳಿತ ಮೀನಾಮೇಷ ಎಣಿಸುತ್ತಿದೆ. ಈ ಸಂಬಂಧ ಕಳೆದೆರಡು ವರ್ಷಗಳಿಂದ ಟೆಂಡರ್ ಕರೆಯದೆ ಕ್ಯಾಂಟೀನ್ ಮುಚ್ಚಲಾಗಿದೆ. ಈ ಮುಂಚೆ ಪ್ರತಿನಿತ್ಯ ಕಾರ್ಕಳ ತಾಲೂಕಿನ ದೂರ ದೂರದಿಂದ ಬರುವ ಸಾರ್ವಜನಿಕರಿಗೆ ತಾಲೂಕ ಕಚೇರಿ ಕ್ಯಾಂಟೀನ್‌ನಲ್ಲಿ ಊಟ ಉಪಹಾರ ಸಿಗುತ್ತಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಕ್ಯಾಂಟೀನ್ ಮುಚ್ಚಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಹಿಂದೆ ಪ್ರತಿ ವರ್ಷ ಕ್ಯಾಂಟೀನ್ ನಡೆಸಲು ಟೆಂಡರ್ ಕರೆಯಲಾಗುತ್ತಿತ್ತು.

ಅದರಂತೆ ಮಾಸಿಕ 7000 ಬಾಡಿಗೆಯೊಂದಿಗೆ ಟೆಂಡರ್ ಪಡೆದು ಕ್ಯಾಂಟೀನ್ ನಡೆಸುತ್ತಿದ್ದರು. ಆದರೆ ಕಳೆದ ಎರಡು ವರ್ಷಗಳಿಂದ ಕ್ಯಾಂಟೀನ್ ಕಟ್ಟಡದ ಅವ್ಯವಸ್ಥೆ ಹಾಗೂ ಇತರೆ ಮೂಲಸೌಕರ್ಯದ ನೆಪವೊಡ್ಡಿ ಕ್ಯಾಂಟೀನ್ ಮುಚ್ಚಲಾಗಿದೆ ಕ್ಯಾಂಟೀನ್ ನಡೆಸುವ ನಿಟ್ಟಿನಲ್ಲಿ ಮರು ಟೆಂಡರ್ ಮಾಡದಿರುವ ಕುರಿತು ಕಾರ್ಕಳ ತಹಶೀಲ್ದಾರ್ ಪ್ರದೀಪ್ ಕುಡೇಕರ್ ಅವರನ್ನು ಪ್ರಶ್ನಿಸಿದಾಗ ಕಳೆದೆರಡು ವರ್ಷಗಳಿಂದ ಟೆಂಡರ್ ಕರೆದರು ಯಾರು ಕೂಡ ಆಸಕ್ತಿ ವಹಿಸುತ್ತಿಲ್ಲ ಪ್ರಮುಖವಾಗಿ ಕಟ್ಟಡವು ದುರಸ್ತಿಯಲ್ಲಿದೆ. ಅಲ್ಲದೆ ಸರಕಾರಿ ರಜಾ ದಿನಗಳಲ್ಲಿ ಕ್ಯಾಂಟೀನ್ ನಡೆಸುವವರು ಅನಿವಾರ್ಯವಾಗಿ ಮುಚ್ಚಬೇಕಾದ ಹಿನ್ನೆಲೆಯಲ್ಲಿ ಕ್ಯಾಂಟೀನ್ ನಡೆಸಲು ಹಿಂದೇಟು ಹಾಕುತ್ತಿದ್ದಾರೆ. ತಾಲೂಕು ಕಚೇರಿ ಸುತ್ತಮುತ್ತ ಕ್ಯಾಂಟೀನ್‌ಗಳು ಇರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿಯ ಸಮಸ್ಯೆ ಇಲ್ಲ. ಆದರೂ ಕ್ಯಾಟರಿಂಗ್ ವ್ಯವಸ್ಥೆಯ ಮೂಲಕ ಕಚೇರಿ ದಿನಗಳಲ್ಲಿ ಮಾತ್ರ ಕ್ಯಾಂಟೀನ್ ತೆರೆಯಲು ಚಿಂತನೆ ನಡೆಸಲಾಗುತ್ತದೆ ಎಂದಿದ್ದಾರೆ.

ಆದರೆ ಹಲವಾರು ವರ್ಷಗಳಿಂದ ಕ್ಯಾಂಟೀನ್ ನಡೆಸುತ್ತಿದ್ದು ಇದೀಗ ಎರಡು ವರ್ಷಗಳಿಂದ ತಾಲೂಕು ಆಡಳಿತ ನಿರಾಸಕ್ತಿ ವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Edited By : Nagesh Gaonkar
Kshetra Samachara

Kshetra Samachara

18/08/2022 04:21 pm

Cinque Terre

10.02 K

Cinque Terre

7

ಸಂಬಂಧಿತ ಸುದ್ದಿ