ಮುಲ್ಕಿ: ಕಳೆದ ಕೆಲ ದಿನಗಳ ಹಿಂದೆ ಭಾರಿ ಮಳೆ ಗಾಳಿಗೆ ನೆರೆ ಬಂದು ನೂರಾರು ಎಕರೆ ಕೃಷಿ ನಾಶವಾಗಿದ್ದ ನಾಶವಾಗಿದ್ದ ಮುಲ್ಕಿ ತಾಲೂಕು ವ್ಯಾಪ್ತಿಯ ಪಂಜ, ಉಲ್ಯಾ, ಕೊಯಿಕುಡೆ ಪ್ರದೇಶಗಳ ಗ್ರಾಮಸ್ಥರ ಅಹವಾಲುಗಳನ್ನು ಸ್ವೀಕರಿಸಲು ಸ್ವತಹ ಜಿಲ್ಲಾಧಿಕಾರಿಗಳು ಹಾಗೂ ಶಾಸಕರು ಆಗಮಿಸಿ ಗ್ರಾಮಸ್ಥರ ಅಹವಾಲು ಸ್ವೀಕರಿಸಬೇಕಾಗಿದ್ದ ಗ್ರಾಮ ವಾಸ್ತವ್ಯ ಸಭೆ ಏಕಾಏಕಿ ರದ್ದಾಗಿದ್ದು ಗ್ರಾಮಸ್ಥರ ಆಕೋಶಕ್ಕೆ ಕಾರಣವಾಗಿದೆ.
ಮೊನ್ನೆಯಷ್ಟೆ ರಾಜ್ಯದ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ದಕ್ಷಿಣ ಕನ್ನಡ ಜಿಲ್ಲೆಯ ನೆರೆಪೀಡಿತ ಪ್ರದೇಶಗಳಿಗೆ ವೈಮಾನಿಕ ಸಮೀಕ್ಷೆ ನಡೆಸಲು ಆಗಮಿಸುವಾಗಲೂ ಮುಖ್ಯಮಂತ್ರಿ ಬಾರದೆ ನಿರ್ಲಕ್ಷಕ್ಕೆ ಒಳಗಾದ ಕೆಮ್ರಾಲ್ ಗ್ರಾಮ ಪಂಚಾಯಿತಿಯ ಪಂಜ ಗ್ರಾಮ ಇದೀಗ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ರದ್ದು ಪಡಿಸಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಮತ್ತಷ್ಟು ಕಾರಣವಾಗಿದೆ.
ಜಿಲ್ಲಾಧಿಕಾರಿಗಳು ಶನಿವಾರ ಗ್ರಾಮ ವಾಸ್ತವ್ಯಕ್ಕೆ ಬರುತ್ತಾರೆಂದು ಹಾಕಿದ್ದ ಚಪ್ಪರ, ಪೆಂಡಾಲ್ ಹಾಗೂ ಇತರ ವ್ಯವಸ್ಥೆಗಳಿಗೆ ಹಾಕಿದ ಸರಕಾರದ ಲಕ್ಷಾಂತರ ಹಣ ಪೋಲಾಗಿದ್ದು ಗ್ರಾಮ ವಾಸ್ತವ್ಯ ರದ್ದು ಹಿನ್ನೆಲೆಯಲ್ಲಿ ಹಾಕಿರುವ ಚಪ್ಪರಗಳನ್ನು ತೆಗೆಯುತ್ತಿರುವ ದೃಶ್ಯ ಕಾಣುತ್ತಿತ್ತು.ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ ಅಂತಾಗಿದೆ ಎನ್ನುತ್ತಾರೆ ಸ್ಥಳೀಯ ಗ್ರಾಮಸ್ಥರು.
ಕಳೆದ ಜುಲೈ ತಿಂಗಳಲ್ಲಿ ಬಿರುಸು ಪಡೆದುಕೊಂಡಿದ್ದ ಮಳೆಯಿಂದಾಗಿ ನೆರೆ ಹಾನಿ ಎದುರಿಸಿದ ಗ್ರಾಮಗಳಲ್ಲಿ ಪಂಜವೂ ಒಂದು. ಹೀಗಾಗಿ ಡಿಸಿ ಅವರು ಇದೇ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಹೂಡಲು ಮುಂದಾಗಿರುವುದು ಗ್ರಾಮಸ್ಥರಲ್ಲೂ ಹೆಚ್ಚಿನ ಭರವಸೆ ಇದ್ದು ಎಲ್ಲವೂ ರಾಜಕೀಯ ಚದುರಂಗದಾಟದಲ್ಲಿ ಮುಳುಗಿ ಹೋಯಿತು ಎಂದು ಗ್ರಾಮಸ್ಥರು ಅಸಮಾಧಾನ ಹೊರಹಾಕಿದ್ದಾರೆ.
Kshetra Samachara
15/07/2022 06:44 pm