ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಎಟಿಎಂ ಗ್ರಾಹಕರೇ ಎಚ್ಚರ!: ಹರಿದ, ಕಲೆಗಳಾದ ನೋಟುಗಳು ಬರುತ್ತಿವೆ!

ಮಂಗಳೂರು: ಎಟಿಎಂ ಗ್ರಾಹಕರು ಎಚ್ಚರದಿಂದ ಇರಬೇಕು. ಹಣ ಡ್ರಾ ಮಾಡುವ ಸಂದರ್ಭ ಹರಿದ, ಕಲೆಗಳಾದ ನೋಟುಗಳು ಬರುತ್ತಿವೆ ಎಚ್ಚರ..!

ಹೌದು ನಗರದ ಎಟಿಎಂ ಒಂದರಲ್ಲಿ ಹಣ ಡ್ರಾ ಮಾಡಿದ ಗ್ರಾಹಕರೊಬ್ಬರು ಹರಿದಿರುವ, ಕಲೆಗಳುಳ್ಳ ನೋಟುಗಳು ಬಂದಿರೋದನ್ನು ನೋಡಿ ಗಾಬರಿಗೊಂಡಿದ್ದಾರೆ. ಇವರು 10 ಸಾವಿರ ರೂ‌. ಡ್ರಾ ಮಾಡಿದ್ದು, ಅದರಲ್ಲಿ 9,500 ರೂ‌. ನೋಟುಗಳು ಸರಿಯಿರಲಿಲ್ಲ.

ಆದರೆ ಅವರ ಅದೃಷ್ಟಕ್ಕೆ ಎಟಿಎಂ ಪಕ್ಕದಲ್ಲಿಯೇ ಬ್ಯಾಂಕ್ ನ ಬ್ರಾಂಚ್ ಇತ್ತು. ಅಲ್ಲದೆ ಎಟಿಎಂನಲ್ಲಿಯೇ ಸೆಕ್ಯುರಿಟಿ ಇದ್ದ ಹಿನ್ನೆಲೆಯಲ್ಲಿ ಆತನೂ ಇದನ್ನು ಗಮನಿಸಿದ್ದನು. ಪರಿಣಾಮ ಬ್ಯಾಂಕ್ ಗೆ ಹೋಗಿ ತೋರಿಸಿದಾಗ ನೋಟುಗಳನ್ನು ಬದಲಾಯಿಸಿ ನೀಡಲುಅಧಿಕಾರಿಗಳು ಒಪ್ಪಿದ್ದಾರೆ.

ಒಂದು ವೇಳೆ ಬ್ಯಾಂಕ್ ಶಾಖೆಯಿಲ್ಲದ, ಸೆಕ್ಯುರಿಟಿ ಗಾರ್ಡ್ ಗಳು ಇಲ್ಲದ ಎಟಿಎಂಗಳಾಗುತ್ತಿದ್ದರೆ ಬ್ಯಾಂಕ್ ಅಧಿಕಾರಿಗಳು ನೋಟುಗಳನ್ನು ಬದಲಿಸಿ ನೀಡುತ್ತಿರಲಿಲ್ಲ‌. ಆದ್ದರಿಂದ ಎಟಿಎಂಗೆ ಹಣ ತುಂಬಿಸುವ ಸಂದರ್ಭ ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸುವುದು ಸರಿಯಲ್ಲ.

Edited By :
Kshetra Samachara

Kshetra Samachara

11/07/2022 10:27 am

Cinque Terre

7.03 K

Cinque Terre

0

ಸಂಬಂಧಿತ ಸುದ್ದಿ