ಉಡುಪಿ: ಜಿಲ್ಲೆಯಲ್ಲಿ ಗೋ ಕಳ್ಳತನ, ಅಕ್ರಮ ಗೋ ಸಾಗಾಟ, ಧರ್ಮಗಳ ನಡುವೆ ಸಂಘರ್ಷಕ್ಕೆ ಕಾರಣ ಆಗುತ್ತಿವೆ. ಹೀಗಾಗಿ ಇದನ್ನು ತಡೆಗಟ್ಟಲು ಸರ್ಕಾರಿ ಗೋ ಶಾಲೆಗಳನ್ನು ನಿರ್ಮಾಣ ಮಾಡಿ ಎನ್ನುವ ಕೂಗು ಬಲವಾಗಿ ಕೇಳಿ ಬರುತ್ತಿದೆ. ಸದ್ಯ ಜಿಲ್ಲೆಯಲ್ಲಿ 22.52 ಎಕರೆ ಜಾಗದಲ್ಲಿ ಸರ್ಕಾರಿ ಗೋ ಶಾಲೆ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ.
ಉಡುಪಿ ಜಿಲ್ಲೆಯಲ್ಲಿ ಸದ್ಯ 16 ಗೋ ಶಾಲೆಗಳು ಕಾರ್ಯ ನಿರ್ವಹಿಸುತ್ತಿದೆ, ಈ ಪೈಕಿ ಕೆಲವು ಗೋ ಶಾಲೆಗಳಿಗಷ್ಟೇ ಅನುದಾನ ಬರುತ್ತಿದ್ದು, ಉಳಿದ ಗೋ ಶಾಲೆಗಳನ್ನು ಖಾಸಗಿಯವರೇ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಪೂರ್ಣ ಪ್ರಮಾಣದ ಸರ್ಕಾರಿ ಗೋ ಶಾಲೆಗಾಗಿ, ಹೆಬ್ರಿ ತಾಲೂಕಿನಲ್ಲಿ ಸುಮಾರು 13.24 ಎಕರೆ ಹಾಗೂ ಬೈಂದೂರಿನಲ್ಲಿ 9.28 ಎಕರೆ ಸ್ಥಳಕ್ಕೆ ಅನುಮೋದನೆ ಸಿಕ್ಕಿದ್ದು, 53 ಲಕ್ಷ ಅನುದಾನ ಕೂಡ ಸರ್ಕಾರ ನೀಡಿದೆ. ಸದ್ಯ ಆರಂಭಿಕ ಹಂತದ ಕೆಲಸ ಕಾರ್ಯಗಳು ನಡೆಯುತ್ತಿದ್ದು, ಸರ್ಕಾರದ ಗೋ ಶಾಲೆ ನಿರ್ಮಾಣ ಆಗುತ್ತಿರುವುದು ಗೋ ಪ್ರೇಮಿಗಳಿಗೆ ಸಂತಸ ತಂದಿದೆ.
Kshetra Samachara
17/06/2022 06:18 pm