ಕಾಪು: ಹಲವು ಬಾರಿ ತೆರವುಗೊಳಿಸುವಂತೆ ಗ್ರಾ.ಪಂ. ನೋಟಿಸ್ ನೀಡಿದರೂ, ತೆರವುಗೊಳಿಸದೆ ಉಳಿಸಿದ ಗೂಡಂಗಡಿಗಳನ್ನು ಇಂದು ಪಡುಬಿದ್ರಿ ಗ್ರಾಮ ಪಂಚಾಯತಿ ತೆರವು ಕಾರ್ಯ ನಡೆಸುತ್ತಿದೆ.
ಈ ಬಗ್ಗೆ ಮಾತನಾಡಿದ ಗ್ರಾ.ಪಂ. ಅಧ್ಯಕ್ಷ ರವಿ ಶೆಟ್ಟಿ, ಈ ಹಿಂದೆಯೆ ಗೂಡಂಗಡಿಗಳನ್ನು ತೆರವುಗೊಳಿಸಲು ನೋಟಿಸ್ ನೀಡಲಾಗಿದೆ. ಕೆಲವರು ಮಾನ್ಯತೆ ನೀಡಿ ತೆರವು ನಡೆಸಿದರೆ, ಇನ್ನು ಕೆಲವರು ಉಳಿಸಿದಂತಹ ಹದಿನೈದು ಗೂಡಂಗಡಿಗಳನ್ನು ತೆರವುಗೊಳಿಸುವ ಕೆಲಸ ನಡೆಯುತ್ತಿದೆ. ಪಡುಬಿದ್ರಿ ಮುಖ್ಯ ಪೇಟೆಯಲ್ಲಿ ಉದ್ಭವಗೊಂಡಿರುವ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸುವ ಸಲುವಾಗಿ ಸಾರ್ವಜನಿಕ ಸಭೆ ಕರೆದು ಅದರ ನಿರ್ಣಯದಂತೆ ಈ ಕಾರ್ಯಚರಣೆ ನಡೆಯುತ್ತಿದ್ದು, ಇದೀಗ ಸರ್ವಿಸ್ ರಸ್ತೆಯಲ್ಲಿ ನಿಲುಗಡೆಗೊಳಿಸುತ್ತಿರುವ ಕಾರು ಹಾಗೂ ಅಟೋ ರಿಕ್ಷಾಗಳಿಗೆ ಪರ್ಯಾಯವಾಗಿ ಈ ಗೂಡಂಗಡಿಗಳನ್ನು ತೆರವುಗೊಳಿಸಿದ ಪ್ರದೇಶದಲ್ಲಿ ವ್ಯವಸ್ಥೆ ಕಲ್ಪಿಸಲಾಗುವುದು.
ಸರ್ವಿಸ್ ರಸ್ತೆಯನ್ನು ಸರ್ವಿಸ್ ಬಸ್ ಹಾಗೂ ತಡೆ ರಹಿತ ಬಸ್ ಗಳ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು. ಬಸ್ ಸಂಚಾರ ಸರ್ವಿಸ್ ರಸ್ತೆಯಲ್ಲಿ ಆರಂಭಗೊಂಡ ಬಳಿಕ ಯಾವುದೇ ವಾಹನಗಳಿಗೆ ಸರ್ವಿಸ್ ರಸ್ತೆಯಲ್ಲಿ ಪಾರ್ಕಿಂಗ್ ಮಾಡಲು ಅವಕಾಶವಿಲ್ಲ. ಅದಲ್ಲದೆ ಬೇಡಿಕೆ ಇದ್ದರೆ ಮುಂದಿನ ದಿನದಲ್ಲಿ ಗೂಡಂಗಡಿಗಳಿಗೂ ಬದಲಿ ವ್ಯವಸ್ಥೆ ಕಲ್ಪಿಸಲಾಗುವುದೆಂದರು.
Kshetra Samachara
16/06/2022 07:04 pm