ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ: ನದಿಗೆ ಬಿದ್ದ ತಹಶೀಲ್ದಾರ್ ರಕ್ಷಣೆ : ಇದು ಅಣಕು ಕಾರ್ಯಾಚರಣೆ!

ಬ್ರಹ್ಮಾವರ: ಬ್ರಹ್ಮಾವರ ತಾಲೂಕು ತಹಶೀಲ್ದಾರ್ ರಾಜಶೇಖರ ಮೂರ್ತಿ ಅವರು ಬೆಳಗ್ಗೆ ನೀಲಾವರ ಪಂಚಮಿ ಕಾನನ ಕೂರಾಡಿ ಸೇತುವೆ ಬಳಿ ಸೀತಾನದಿಗೆ ಬಿದ್ದಿದ್ದರು.

ಈ ಸುದ್ದಿ ತಿಳಿದ ಉಡುಪಿ ಅಗ್ನಿಶಾಮಕ ದಳ ಮತ್ತು ಬ್ರಹ್ಮಾವರ ಗೃಹರಕ್ಷಕ ದಳದವರು ಕ್ಷಿಪ್ರ ಕಾರ್ಯಾಚರಣೆ ಮಾಡಿ ರಕ್ಷಿಸಿದ್ದಾರೆ.ಆದರೆ ಇದೊಂದು ಅಣಕು ಕಾರ್ಯಾಚರಣೆಯಾಗಿತ್ತು! ಮಳೆಗಾಲದಲ್ಲಿ ಅತಿ ಹೆಚ್ಚು ಪ್ರವಾಹ ಬರುವ ಸೀತಾನದಿಯಲ್ಲಿ ಬ್ರಹ್ಮಾವರ ತಾಲೂಕು ನೆರೆ ರಕ್ಷಣಾ ತಂಡದವರಿಂದ ನಡೆದ ಅಣಕು ಕಾರ್ಯಾಚರಣೆಯಲ್ಲಿ ಸ್ವತಃ ತಹಶೀಲ್ದಾರ್ ನದಿಗೆ ಇಳಿದು ತಂಡದ ಕ್ಷಮತೆಯನ್ನು ಪರಿಶೀಲಿಸಿದ್ದು ಹೀಗೆ.

ಈ ಭಾಗದ ಜನ ಸೇತುವೆ ಬಳಿ ನಿಂತು ಒಂದು ಕ್ಷಣ ದಂಗಾಗಿ ಹೋದರು.ಕೊನೆಗೆ ಇದು ಅಣಕು ಕಾರ್ಯಾಚರಣೆ ಎಂಬ ವಿಷಯ ಮನದಟ್ಟಾಯಿತು.ಈ ಕಾರ್ಯಾಚರಣೆಯಲ್ಲಿ ನುರಿತ ಮುಳುಗು ತಜ್ಞರು ,ಆಂಬುಲೆನ್ಸ್ ಹಗ್ಗ,ಲೈಫ್ ಜಾಕೆಟ್ ಇತ್ಯಾದಿ ಪರಿಕರಗಳನ್ನು ಬಳಸಲಾಗಿತ್ತು.ನೆರೆ ನೀರಿಗೆ ಬಿದ್ದಾಗ ತಕ್ಷಣ ಕಾರ್ಯಾಚರಣೆ ಮಾಡಿ ರಕ್ಷಣೆ ಮಾಡುವ ಕುರಿತು ಟಿಪ್ಸ್ ನೀಡಲಾಯಿತು.

Edited By : Nagesh Gaonkar
Kshetra Samachara

Kshetra Samachara

06/06/2022 04:50 pm

Cinque Terre

5.58 K

Cinque Terre

0

ಸಂಬಂಧಿತ ಸುದ್ದಿ