ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ: ಅಧಿಕಾರಿಗಳಿಂದ ಅನಧಿಕೃತ ಶೆಡ್‌ಗಳ ತೆರವು ಕಾರ್ಯಾಚರಣೆ

ಬ್ರಹ್ಮಾವರ: ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹಲವೆಡೆ ಸರಕಾರಿ ಜಾಗದಲ್ಲಿ ನಿರ್ಮಿಸಲಾಗಿದ್ದ ಶೆಡ್‌ಗಳ ತೆರವು ಕಾರ್ಯಾಚರಣೆ ನಡೆಯಿತು. ತಾಲೂಕಿನ ಕುದಿ, ಕೆಂಜೂರು ಮತ್ತು ಹೊಸೂರು ಗ್ರಾಮಗಳಲ್ಲಿ ಸರಕಾರಿ ಭೂಮಿಯಲ್ಲಿ ಅಕ್ರಮವಾಗಿ ಶೆಡ್‌ಗಳನ್ನು ನಿರ್ಮಿಸಲಾಗಿತ್ತು. ಈ ರೀತಿ ನಿರ್ಮಾಣ ಮಾಡಿದ್ದ 19 ಶೆಡ್‌ಗಳನ್ನು ಬ್ರಹ್ಮಾವರ ತಾಲೂಕು ದಂಡಾಧಿಕಾರಿ ಹಾಗೂ ತಹಶೀಲ್ದಾರ್ ರಾಜಶೇಖರ್ ಮೂರ್ತಿ ಸ್ವತಃ ತಮ್ಮ ಇಲಾಖೆಯ ಸಿಬ್ಬಂದಿ, ಅಧಿಕಾರಿಗಳೊಂದಿಗೆ ತೆರಳಿ ಸಂಪೂರ್ಣ ನೆಲಸಮ ಮಾಡಿದರು. ಅಷ್ಟೇ ಅಲ್ಲದೆ ಭೂಗಳ್ಳರ ಪಾಲಾಗುತ್ತಿದ್ದ ಸರಕಾರದ ಎಕರೆ ಗಟ್ಟಲೆ ಭೂಮಿಯನ್ನು ಇಲಾಖೆಯ ವಶಕ್ಕೆ ಪಡೆದುಕೊಂಡರು.

ತಹಶೀಲ್ದಾರ್ ಕಾರ್ಯಚರಣೆಯಲ್ಲಿ ಕಂದಾಯ ನಿರೀಕ್ಷಕರಾದ ಲಕ್ಷ್ಮಿ ನಾರಾಯಣ ಭಟ್, ಕುದಿ, ಕೆಂಜೂರು, ಹೊಸೂರು ಗ್ರಾಮದ ಗ್ರಾಮ ಕರಣಿಕರು, ಗ್ರಾಮ ಸಹಾಯಕರು ಭಾಗಿಯಾಗಿದ್ದರು.

Edited By : Manjunath H D
Kshetra Samachara

Kshetra Samachara

17/03/2022 10:29 pm

Cinque Terre

21.18 K

Cinque Terre

1

ಸಂಬಂಧಿತ ಸುದ್ದಿ