ಪುತ್ತೂರು: ಫೆ. 19 ರಂದು ಉದ್ಘಾಟನೆಗೊಂಡ ಕಡತ ವಿಲೇವಾರಿ ಕಾರ್ಯಕ್ರಮ ಜಿಲ್ಲೆಯಲ್ಲಿ ವೇಗವಾಗಿ ನಡೆಯುತ್ತಿದೆ. ಇದಕ್ಕಾಗಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಪ್ರತಿ ದಿನ ಹೆಚ್ಚುವರಿ ಕೆಲಸ ಮಾಡುತ್ತಿದ್ದಾರೆ. ಫೆ.28ರ ಒಳಗಾಗಿ ಜಿಲ್ಲೆಯಲ್ಲಿ 82 ಸಾವಿರ ಅರ್ಜಿಗಳನ್ನು ವಿಲೇವಾರಿ ಮಾಡುವ ಗುರಿ ಇಟ್ಟುಕೊಂಡು ಕೆಲಸ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ.ವಿ ರಾಜೇಂದ್ರ ಹೇಳಿದರು.
ಕಡತ ವಿಲೇವಾರಿ ಸಂಬಂಧ ಮಂಗಳೂರು, ಬಂಟ್ವಾಳ ತಾಲೂಕುಗಳ ಪ್ರಗತಿ ಪರಿಶೀಲನೆ ಮಾಡಿದ ಬಳಿಕ ಬುಧವಾರ ಸಂಜೆ ಪುತ್ತೂರಿಗೆ ಆಗಮಿಸಿ ಪರಿಶೀಲನೆ ಮಾಡಿದ ಅವರು ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು.
3 ತಾಲೂಕುಗಳ ಪ್ರಗತಿ ಪರಿಶೀಲಿಸಿದ್ದೇನೆ. ಅಧಿಕಾರಿಗಳು ಹೆಚ್ಚುವರಿ ಕೆಲಸ ಮಾಡುತ್ತಿದ್ದಾರೆ. 82,000 ಕಡತಗಳನ್ನು ಪತ್ತೆ ಹಚ್ಚಲಾಗಿದೆ. ಇದರಲ್ಲಿ 50 ಸಾವಿರ ಕಡತಗಳು ಹಳೆಯದಲ್ಲ. ಅವು ಪ್ರತೀ ವಾರ ಸಲ್ಲಿಕೆಯಾಗುತ್ತಿರುವ ಕಡತಗಳು. ಇದರಲ್ಲಿ ಪಿಂಚಣಿ, ಚುನಾವಣಾ ಗುರುತುಪತ್ರ, ಕನ್ವರ್ಷನ್ ಮುಂತಾದ ಅರ್ಜಿಗಳಿವೆ. ಇವುಗಳ ಪೈಕಿ ಅತ್ಯಂತ ಹಳೆಯ ಕಡತಗಳನ್ನು ಪಟ್ಟಿ ಮಾಡಲು ಸೂಚಿಸಲಾಗಿದೆ. ಕ್ಲೋಸ್ ಮಾಡಲಾಗದೇ ಇರುವ ಕಡತಗಳಿದ್ದರೆ ಸಂಬಂಧಪಟ್ಟವರಿಗೆ ಇದರ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ ಎಂದರು.
ತಾಲೂಕು ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಯೂನಿಕ್ ಡಿಸೆಬಲಿಟಿ ಐಡಿ ಕೊಡುವ ವಿಚಾರದಲ್ಲಿರುವ ತಾಂತ್ರಿಕ ಮಅಡಚಣೆಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ. ಆಡಳಿತಾತ್ಮಕ ವಿಚಾರಗಳನ್ನು ಆಡಳಿತ ವೈದ್ಯಾಧಿಕಾರಿ ಜತೆ ಚಲರ್ಚಿಸಿದ್ದೇನೆ. ಒಂದು ವಾರದಲ್ಲಿ ಇದನ್ನು ಇತ್ಯರ್ಥಪಡಿಸುವ ಸಂಬಂಧ ಜಿಪಂ, ತಾಲೂಕು ಆಡಳಿತದ ನೆರವು ಪಡೆಯಲು ತಿಳಿಸಿದ್ದೇನೆ ಎಂದರು.
Kshetra Samachara
24/02/2022 12:44 pm