ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುತ್ತೂರು: ಪತ್ರಕರ್ತ ನಾರಾಯಣ ನಾಯ್ಕ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಹಸ್ತಾಂತರ

ಪುತ್ತೂರು: ಅಕಾಲಿಕವಾಗಿ ನಿಧನರಾದ ಪತ್ರಕರ್ತ ನಾರಾಯಣ ನಾಯ್ಕ ಅಮ್ಮುಂಜೆ ಅವರ ಕುಟುಂಬಕ್ಕೆ ಸರಕಾರದ ವತಿಯಿಂದ ನೀಡಲಾದ ಪರಿಹಾರದ ಚೆಕ್ ಅನ್ನು ಶಾಸಕ ಸಂಜೀವ ಮಠಂದೂರು ಅವರು ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ನಾರಾಯಣ ನಾಯ್ಕ್ ಅವರ ಪತ್ನಿ ಪೂರ್ಣಿಮಾ ಅವರಿಗೆ ಹಸ್ತಾಂತರಿಸಿದರು.

ಸ್ಥಳೀಯ 'ಸುದ್ದಿ ಬಿಡುಗಡೆ' ಪತ್ರಿಕೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಾರಾಯಣ ನಾಯ್ಕ್ ಅವರು ಹೃದಯಾಘಾತದಿಂದ ಮೃತಪಟ್ಟಿದ್ದು, ಬಡತನದಿಂದ ಜೀವನ ನಿರ್ವಹಿಸುತ್ತಿದ್ದ ಅವರ ಪರಿಸ್ಥಿತಿ ಬಗ್ಗೆ ಅರಿತುಕೊಂಡ ಪುತ್ತೂರು ಕಾರ್ಯನಿರತ ಪತ್ರಕರ್ತರ ಸಂಘ , ರಾಜ್ಯ ಘಟಕ ಹಾಗೂ ಸ್ಥಳೀಯ ಶಾಸಕರ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಈ ಪರಿಹಾರ ದೊರೆತಿದೆ.

ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪತ್ರಕರ್ತನ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಮಂಜೂರು ಮಾಡಿದ್ದರು.

Edited By : Shivu K
Kshetra Samachara

Kshetra Samachara

18/12/2021 12:59 pm

Cinque Terre

3.86 K

Cinque Terre

1

ಸಂಬಂಧಿತ ಸುದ್ದಿ