ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇನ್ನು ಮುಂದೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ರಹಿತ ಆನ್ ಲೈನ್ ಪಾವತಿ ಆರಂಭ

ಮಂಗಳೂರು: ಬೆಂಗಳೂರು ಬಳಿಕ ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಗದು ರಹಿತ ಆನ್ ಲೈನ್ ಪಾವತಿ ವಿಧಾನವನ್ನು ಅಳವಡಿಸಲಾಗುತ್ತದೆ ಎಂದು ಮುಡಾ ಅಧ್ಯಕ್ಷ ರವಿಶಂಕರ್ ಮಿಜಾರು ಹೇಳಿದರು‌

ನಗರದ ಉರ್ವಸ್ಟೋರ್ ನಲ್ಲಿರುವ ಮುಡಾ ಕಚೇರಿಯಲ್ಲಿ ಆನ್ಲೈನ್ ಪಾವತಿ ವಿಧಾನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅರ್ಜಿದಾರರು ಹಿಂದೆ ಯಾವುದೇ ಶುಲ್ಕವನ್ನು ಮುಡಾ ಕಚೇರಿಗೆ ಬಂದು ಪಾವತಿಸಬೇಕಿತ್ತು. ಆದರೆ ಈ ವಿನೂತನ ವಿಧಾನದ ಮೂಲಕ ತಾವಿರುವ ಸ್ಥಳದಲ್ಲಿಯೇ ಅರ್ಜಿದಾರರು ಆನ್ಲೈನ್ ಮುಖಾಂತರ ತಾವಿರುವ ಸ್ಥಳದಲ್ಲಿಯೇ ಶುಲ್ಕ ಪಾವತಿ ಮಾಡಬಹುದು.

www.mudamangaluru.in ವೆಬ್ ಸೈಟ್ ಗೆ ಭೇಟಿ ನೀಡಿ ಶುಲ್ಕ ಪಾವತಿ ಮಾಡಬಹುದು. ಅರ್ಜಿದಾರರು ಎಸ್ಎಂಎಸ್ ಮೂಲಕ ಶುಲ್ಕ ಪಾವತಿ ವಿವರವನ್ನು ಖಾತರಿ ಮಾಡಿಕೊಳ್ಳಬಹುದು. ಈ ನೂತನ ವಿಧಾನವನ್ನು ಕಿಯೋನಿಕ್ಸ್ ನ ಸ್ಥಳೀಯ ಸೇವಾದಾರರಾದ ಐ-ಸರ್ಚ್ ಎಂಬ ಸಂಸ್ಥೆ ಸಾಫ್ಟ್‌ವೇರ್ ಅನ್ನು ಅಳವಡಿಸಿದೆ ಎಂದು ರವಿಶಂಕರ್ ಮಿಜಾರು ಹೇಳಿದರು.

Edited By : Nagesh Gaonkar
Kshetra Samachara

Kshetra Samachara

13/10/2021 03:49 pm

Cinque Terre

8 K

Cinque Terre

1

ಸಂಬಂಧಿತ ಸುದ್ದಿ