ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಜಿಲ್ಲಾ ಗ್ರಂಥಾಲಯಕ್ಕೆ ಬನ್ನಂಜೆ ಗೋವಿಂದಾಚಾರ್ಯರ ಹೆಸರು ಹಾಕಲು ಶಾಸಕರ ಮನವಿ

ಉಡುಪಿ: ದೇಶದ ಪ್ರಮುಖ ವಿದ್ವಾಂಸರಲ್ಲಿ ಒಬ್ಬರಾದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ವಿದ್ಯಾವಾಚಸ್ಪತಿ ಗೋವಿಂದಾಚಾರ್ಯರು ಉಡುಪಿಯವರು. ತಮ್ಮ ಪ್ರವಚನಗಳಿಂದಲೇ ಮನೆ ಮಾತಾದ ಬನ್ನಂಜೆ ಗೋವಿಂದಾಚಾರ್ಯರು ಮಾಧ್ವ ತತ್ವದಲ್ಲಿ ಅಮೋಘ ಪಾಂಡಿತ್ಯ ಹೊಂದಿದ್ದರು. ಕನ್ನಡ ಹಾಗೂ ಸಂಸ್ಕೃತದಲ್ಲೂ ಪಾಂಡಿತ್ಯ ಹೊಂದಿದ್ದ ಇವರು ಹಲವು ಕೃತಿಗಳನ್ನೂ ರಚಿಸಿದ್ದಾರೆ.

ದೇಶ ವಿದೇಶಗಳಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಬನ್ನಂಜೆ ಗೋವಿಂದಾಚಾರ್ಯರು ಸಾಹಿತಿ, ವಿದ್ವಾಂಸಕ, ಪತ್ರಕರ್ತ, ಸಂಶೋಧಕ, ಅನುವಾದಕ, ಭಾಷಾಂತರಕಾರ, ಭಾಷ್ಯಾಕಾರ, ಕವಿ, ಪ್ರವಚನಕಾರ, ಉಪನ್ಯಾಸಕ. ಹೀಗೆ ಬಹುವಿಧವಾಗಿ ಅಮೂಲ್ಯ ವಾಙ್ಮಯ ಕೊಡುಗೆ ಧಾರೆಯೆರೆದು ಉಡುಪಿಗೆ ಕೀರ್ತಿ ತಂದ ಇವರ ಹೆಸರು ಉಡುಪಿ ಜಿಲ್ಲಾ ಗ್ರಂಥಾಲಯಕ್ಕೆ ಇಡುವುದು ಸೂಕ್ತ ಎಂದು ಶಾಸಕ ರಘುಪತಿ ಭಟ್ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಇಂದು ಅಧಿಕಾರಿಗಳೊಂದಿಗೆ ಜಿಲ್ಲಾ ಗ್ರಂಥಾಲಯಕ್ಕೆ ಭೇಟಿ ನೀಡಿ ಚರ್ಚಿಸಿದ ಶಾಸಕ ಕೆ ರಘುಪತಿ ಭಟ್ ಅವರು ಗ್ರಂಥಾಲಯದ ಒಂದು ಮಹಡಿಯಲ್ಲಿ ಬನ್ನಂಜೆ ಗೋವಿಂದಾಚಾರ್ಯರ ಗ್ರಂಥಗಳನ್ನು, ಕೃತಿಗಳನ್ನು ಸಂಗ್ರಹಿಸಿ ಇಡುವುದು ಹಾಗೂ ಅವರ ಪ್ರವಚನಗಳ ಆಡಿಯೋ ವಿಷನ್ ಸಂಗ್ರಹಿಸಿ ಇಡುವ ಬಗ್ಗೆ ಸೂಚಿಸಿದರು.

Edited By : PublicNext Desk
Kshetra Samachara

Kshetra Samachara

27/08/2021 02:20 pm

Cinque Terre

4.18 K

Cinque Terre

0

ಸಂಬಂಧಿತ ಸುದ್ದಿ