ಕುಂದಾಪುರ: ಪಟ್ಟಣದ ಪುರಸಭೆಯಲ್ಲಿ ಅರ್ಧದಷ್ಟು ಹುದ್ದೆಗಳು ಖಾಲಿಯಿವೆ. ಸಿಬ್ಬಂದಿ ಕೊರತೆಯಿಂದ ಸಾರ್ವಜನಿಕ ಕೆಲಸ ಕಾರ್ಯಗಳು ನಡೆಯುತ್ತಿವೆಯಾದರೂ ಪುರಸಭೆ ಆಡಳಿತಾತ್ಮಕವಾಗಿ ಹಿನ್ನಡೆ ಉಂಟಾಗುತ್ತಿದೆ.
ಪುರಸಭೆಗೆ ಒಟ್ಟು ಸರಕಾರದಿಂದ 108 ಹುದ್ದೆಗಳು ಮಂಜೂರಾಗಿವೆ. 46 ಪೌರಕಾರ್ಮಿಕರು, ತಲಾ 8 ಮಂದಿ ನೀರು ಸರಬರಾಜು ಸಹಾಯಕ ಅಥವಾ ವಾಲ್ವ್ ಮೆನ್ ಮತ್ತು ಲೋಡರ್‌ಗಳು ಸೇರಿದಂತೆ ಒಟ್ಟು 29 ವಿಧದ ಹುದ್ದೆಗಳಿಗೆ ಸಿಬ್ಬಂದಿ ಮಂಜೂರಾಗಿದೆ. ಈ ಪೈಕಿ 6 ಚಾಲಕ ಹುದ್ದೆ, 8 ಲೋಡರ್ ಹುದ್ದೆಗಳು ಸೇರಿ ಒಟ್ಟು 14 ಹುದ್ದೆಗಳು ಹೆಚ್ಚುವರಿ ಎಂದು ತೀರ್ಮಾನಿಸಲಾಗಿದೆ.
108 ಹುದ್ದೆಗಳಲ್ಲಿ ಈಗ 58 ಹುದ್ದೆಗಳು ಖಾಲಿ ಇವೆ. ಸಿಬ್ಬಂದಿ ಕೊರತೆಯಿದ್ದರೂ ಸಾರ್ವಜನಿಕ ಕೆಲಸ ಕಾರ್ಯಗಳಲ್ಲಿ ವಿಳಂಬ ಮಾಡಲಾಗುತ್ತಿಲ್ಲ. ಸದ್ಯ ಸಮಸ್ಯೆಯ ಬಗ್ಗೆ ಸ್ಥಳೀಯ ಶಾಸಕರಿಗೆ ಮನವಿ ಮಾಡಿಕೊಡಲಾಗಿದೆ.
Kshetra Samachara
03/08/2021 11:59 am