ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಹೆಜಮಾಡಿ ಟೋಲ್ ವಿರುದ್ಧ ಹೋರಾಟ ಸಿದ್ಧತೆ; ತಾರತಮ್ಯಕ್ಕೆ ಆಕ್ರೋಶ

ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಸಮೀಪದ ಉಡುಪಿ ಜಿಲ್ಲೆಯ ಗಡಿ ಪ್ರದೇಶ ಹೆಜಮಾಡಿಯಲ್ಲಿ ಅಕ್ರಮವಾಗಿ ಟೋಲ್ ಗೇಟ್ ನಿರ್ಮಿಸಿ ಕೇವಲ ಮೂರು ಕಿಲೋ ಮೀಟರ್ ಅಂತರದ ಮುಲ್ಕಿ ಭಾಗದ ಪ್ರಯಾಣಿಕರ ವಾಹನಗಳಿಗೆ ಅಕ್ರಮವಾಗಿ ಟೋಲ್ ಮಾಡುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತವಾಗಿದ್ದು, ಇದರ ವಿರುದ್ಧ ಹೋರಾಟ ನಡೆಸುವ ಬಗ್ಗೆ ಮುಲ್ಕಿ ಅಭಿವೃದ್ಧಿ ನಾಗರಿಕ ಸಮಿತಿಯಿಂದ ವಿಶೇಷ ಸಭೆ ಮುಲ್ಕಿಯಲ್ಲಿ ನಡೆಯಿತು.

ಈ ಸಂದರ್ಭ ಸಮಿತಿ ಅಧ್ಯಕ್ಷ ಹರೀಶ್ ಪುತ್ರನ್ ಮಾತನಾಡಿ, ಹೆಜಮಾಡಿಯಿಂದ ಮುಲ್ಕಿಗೆ ಕೇವಲ ಮೂರು ಕಿಲೋ ಮೀಟರ್ ಇದ್ದು, ವಾಹನ ಚಾಲಕರಿಂದ ಅಕ್ರಮ ಟೋಲ್ ವಸೂಲಿ ಮಾಡುತ್ತಿದ್ದಾರೆ. ಈ ಬಗ್ಗೆ ಹೋರಾಟ ಅಗತ್ಯವಾಗಿದ್ದು, ಸಂಸದರ ಜೊತೆ ಸಮಾಲೋಚಿಸಿ ಮುಂದಿನ ಕ್ರಮ ಕೈಗೊಳ್ಳಬೇಕಾಗಿದೆ ಎಂದರು.

ನಾಗರಿಕ ಸಮಿತಿಯ ಮಧು ಆಚಾರ್ಯ ಮಾತನಾಡಿ, ಮುಲ್ಕಿ ಪರಿಸರದ ನಾಗರಿಕರು ತಮ್ಮವಾಹನಗಳನ್ನು ಟೋಲ್ ಸಂಗ್ರಹ ಕೇಂದ್ರದ ಬಳಿಯಲ್ಲಿ ಇರಿಸಿ ಪ್ರತಿಭಟನೆ ನಡೆಸಬೇಕು ಎಂದರು. ಕಳೆದ ಎರಡು ದಿನದ ಹಿಂದೆ ಪ್ರತಿಭಟನೆ ನಡೆಸಿದ ಹೆಜಮಾಡಿ ಪರಿಸರದ ಜನರಿಗೆ ಈಗಾಗಲೇ ರಿಯಾಯಿತಿ ದೊರಕಿದ್ದು, ಮುಲ್ಕಿ ಪರಿಸರದ ಜನರಿಗೆ ತಾರತಮ್ಯ ಯಾಕೆ ಎಂದು ಜೆಡಿಎಸ್ ಮುಖಂಡ ಇಕ್ಬಾಲ್ ಪ್ರಶ್ನಿಸಿದರು. ಕೂಡಲೇ ಅಕ್ರಮ ಟೋಲ್ ಸಂಗ್ರಹ ವಿರುದ್ಧ ಮತ್ತಷ್ಟು ಹೋರಾಟ ನಡೆಸಲು ಮುಲ್ಕಿ ಪರಿಸರದ ನಾಗರಿಕರು ಮುಂದೆ ಬರಬೇಕು ಎಂದು ಹೇಳಿದರು.

ಮುಲ್ಕಿ ನಪಂ ಅಧ್ಯಕ್ಷ ಸುಭಾಷ್ ಶೆಟ್ಟಿ, ಉಪಾಧ್ಯಕ್ಷ ಸತೀಶ್ ಅಂಚನ್, ಸದಸ್ಯ ಪುತ್ತುಬಾವ,ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಶಶಿ ಅಮೀನ್, ಉದಯ ಕುಮಾರ್ ಶೆಟ್ಟಿ ಮತ್ತಿತರರು ಮಾತನಾಡಿದರು.

Edited By : Manjunath H D
Kshetra Samachara

Kshetra Samachara

21/02/2021 11:03 am

Cinque Terre

13.34 K

Cinque Terre

0

ಸಂಬಂಧಿತ ಸುದ್ದಿ