ಉಡುಪಿ : ಉಡುಪಿಯ ಉದ್ಯಾವರ ಪಂಚಾಯತ್ ನಲ್ಲಿ ಇವತ್ತು ಅಪರೂಪದ ಪ್ರಸಂಗ ನಡೆಯಿತು. ಬಹಳಷ್ಟು ಸಮಯಗಳಿಂದ ಇಲ್ಲಿದ್ದ ಗ್ರಾಮಸ್ಥರ ಅಸಮಾಧಾನ ಕಟ್ಟೆಯೊಡೆದು ಪಂಚಾಯತ್ ಸದಸ್ಯರು ಮತ್ತು ಗ್ರಾಮಸ್ಥರು ಸೇರಿ ಪಂಚಾಯತ್ ಕಟ್ಟಡಕ್ಕೆ ಬೀಗ ಜಡಿದ ಪ್ರಸಂಗ ಪ್ರಸಂಗಕ್ಕೆ ಉದ್ಯಾವರ ಪಂಚಾಯತ್ ಸಾಕ್ಷಿಯಾಯಿತು.
ಈ ಹಿಂದಿನಿಂದಲೂ ಉದ್ಯಾವರ ಪಂಚಾಯತ್ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ ಫಿಶ್ ಮೀಲ್ ಘಟಕದ ವಿರುದ್ಧ ಗ್ರಾಮಸ್ಥರು ಅಸಮಾಧಾನ ಹೊರ ಹಾಕುತ್ತಲೇ ಇದ್ದಾರೆ. ಉದ್ಯಾವರ ಪಂಚಾಯತ್ ವ್ಯಾಪ್ತಿಯ ಪಿತ್ರೋಡಿ ಯನ್ನು ಕೈಗಾರಿಕಾ ವಲಯವಾಗಿ ಪರಿವರ್ತನೆ ಮಾಡುವ ಪ್ರಯತ್ನ ನಡೆದಿದೆ.ಈ ವ್ಯಾಜ್ಯವು ಹೈಕೋರ್ಟ್ ಮೆಟ್ಟಿಲೇರಿದೆ ಕೂಡ.
ಈ ಮಧ್ಯೆ ಹಿಂದಿನ ಆಡಳಿತಾಧಿಕಾರಿಗಳು ಪಿತ್ರೋಡಿ ಯನ್ನು ಕೈಗಾರಿಕಾ ವಲಯವನ್ನಾಗಿ ಮಾಡಲು ಅವಕಾಶ ನೀಡಿದ್ದಾರೆಂದು ಆರೋಪಿಸಿ ಗ್ರಾಮಸ್ಥರು ಮತ್ತು ಪಂಚಾಯತ್ ಸದಸ್ಯರು ಪಕ್ಷಭೇದ ಮರೆತು ಪಂಚಾಯತ್ ಗೆ ಬೀಗ ಜಡಿದಿದ್ದಾರೆ. ಈಗಾಗಲೇ ಪಿತ್ರೋಡಿ ಯಲ್ಲಿ ಫಿಶ್ ಮೀಲ್ ಗಳು ಕಾರ್ಯಾಚರಿಸುತ್ತಿದ್ದು ಅವುಗಳಿಂದಾಗಿ ಅನೇಕ ಸಮಸ್ಯೆಗಳು ಸ್ಥಳೀಯರಿಗೆ ಆಗುತ್ತಿವೆ. ಇದರ ಮಧ್ಯೆ ಈ ಪ್ರದೇಶವನ್ನು ಕೈಗಾರಿಕಾ ವಲಯವನ್ನಾಗಿ ಮಾಡಿ ಪರಿವರ್ತಿಸುವುದರಿಂದ ಹೊಸ ಫಿಶ್ ಮೀಲ್ ಗಳು ಬರುವ ಭೀತಿ ಎದುರಾಗಿದೆ.ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪಂಚಾಯತ್ ಸದಸ್ಯರ ಬೆಂಬದೊಂದಿಗೆ ಬೀಜ ಜಡಿದು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ!
Kshetra Samachara
19/02/2021 08:26 pm