ಕೋಟ: ಜನವರಿ 1 ರಿಂದ ದೇಶಾದ್ಯಂತ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಿರುವ ಕೇಂದ್ರ ಸರಕಾರದ ಕ್ರಮದಿಂದ ಸಾಸ್ತಾನ ನವಯುಗ ಕಂಪನಿಯ ಟೋಲ್ ನಲ್ಲಿ ಫಾಸ್ಟ್ ಟ್ಯಾಗ್ ನಾಳೆಯಿಂದ ಪ್ರಾರಂಭಗೊಳ್ಳಲಿದೆ.
ಈ ಹಿನ್ನೆಲೆಯಲ್ಲಿ ಸಾಸ್ತಾನ ಟೋಲ್ ನಲ್ಲಿ ಕೋಟ ಜಿ.ಪಂ ವ್ಯಾಪ್ತಿಯ ವಾಹನಗಳಿಗೆ ರಿಯಾಯಿತಿ ರದ್ದುಗೊಳಿಸಿ ಕಡ್ಡಾಯ ಫಾಸ್ಟ್ ಟ್ಯಾಗ್ ಗೊಳಿಸಲು ನವಯುಗ ಕಂಪನಿ ನಿರ್ಧರಿಸಿತು.
ಇದರಿಂದ ಆಕ್ರೋಶಗೊಂಡ ಹೆದ್ದಾರಿ ಜಾಗೃತಿ ಸಮಿತಿ ಡಿ.27ರಂದು ಸ್ಥಳೀಯರಿಗೆ ಟೋಲ್ ವಿಧಿಸದಂತೆ ಸೂಚಿಸಿತು. ಅಲ್ಲದೆ, ವಿಧಿಸಿದರೆ ಉಗ್ರ ಹೋರಾಟ ಕೈಗೊಳ್ಳುವುದಾಗಿ ಘೋಷಿಸಿತ್ತು.
ಇದರಿಂದ ಗುರುವಾರ ಉಡುಪಿ ಜಿಲ್ಲಾಧಿಕಾರಿ ಮೂಲಕ ಸ್ಥಳೀಯರಿಗೆ ಈ ಹಿಂದೆ ಇದ್ದ ವಿನಾಯಿತಿ ಬಗ್ಗೆ ಮನವರಿಕೆ ಮಾಡಿಕೊಟ್ಟಿತು.
ಈ ಹಿನ್ನೆಲೆಯಲ್ಲಿ ಗುರುವಾರ ಪುನಃ ಹೆದ್ದಾರಿ ಜಾಗೃತಿ ಸಮಿತಿ ನೂರಾರು ಜನ ಟೋಲ್ ಬಳಿ ಜಮಾಯಿಸಿ ನವಯುಗ ಕಂಪನಿಯ ಅಧಿಕಾರಿಗಳಲ್ಲಿ ಫಾಸ್ಟ್ ಟ್ಯಾಗ್ ವಿಧಿಸದಂತೆ, ಅದಲ್ಲದೆ ಉಡುಪಿ ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಮನವರಿಕೆ ಮಾಡಿ ಕೊಟ್ಟ ವಿಚಾರ ತಿಳಿಸಿ ಫಾಸ್ಟ್ ಟ್ಯಾಗ್ ವಿಧಿಸಿದ್ದೇ ಆದರೆ ನಾಳೆಯಿಂದ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿತು.
ಈ ಹಿಂದೆ ಸ್ಥಳೀಯ ಜಿ.ಪಂ. ವ್ಯಾಪ್ತಿಯ ವಾಹನಗಳಿಗೆ ಟೋಲ್ ಗೇಟ್ 4ರಲ್ಲಿ ಸಂಚರಿಸಲು ಅನುವು ಮಾಡಿ ಕೊಡಬೇಕು ಎಂದು ಆಗ್ರಹಿಸಿತು.
ಇದಕ್ಕೆ ನವಯುಗ ಕಂಪನಿ ಅಧಿಕಾರಿ ಬಷೀರ್ ನಾಳೆಯಿಂದ ಗೇಟ್ 4ರ ಬಳಿ ಸ್ಥಳೀಯ ವಾಹನಗಳಿಗೆ ಸಂಚರಿಸಲು ಅನುವು ಮಾಡಿ ಕೊಡಲಾಗುವುದು ಎಂದು ತಿಳಿಸಿದರು.
Kshetra Samachara
31/12/2020 07:38 pm