ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ಎರಡನೇ ಹಂತದ ಚುನಾವಣೆ ಪ್ರಕ್ರಿಯೆ ನಡೆಯುತ್ತಿದ್ದು, ಇದೀಗ ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನ ಆವರಣದಲ್ಲಿ ಸಕಲ ಸಿದ್ಧತೆ ನಡೆಯುತ್ತಿದೆ,
ಕುಂದಾಪುರ ತಾಲೂಕಿನಲ್ಲಿ ಎರಡನೇ ಹಂತದ ಚುನಾವಣೆಯ ಮಸ್ಟರಿಂಗ್ ನಡೆಯುತ್ತಿತ್ತು ಆರ್ ಎನ್ ಶೆಟ್ಟಿ ಕಾಲೇಜಿನ ಸಭಾಂಗಣದಲ್ಲಿ ಮತಗಟ್ಟೆ ಅಧಿಕಾರಿಗಳಿಗೆ ಮಸ್ಟರಿಂಗ್ ಪ್ರಕ್ರಿಯೆ ನಡೆಯುತ್ತಿತ್ತು.
ಚುನಾವಣಾ ಅಧಿಕಾರಿಗಳಿಗೆ ಸರಿಯಾದ ವ್ಯವಸ್ಥೆ ಇಲ್ಲದೆ ಕರೋನಾ ನಿಯಮಾವಳಿಗಳನ್ನು ಪಾಲನೆ ಮಾಡದೆ ಇರುವುದನ್ನು ಕಂಡು ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಕುಂದಾಪುರದ ಎಸಿ ಕೆ ರಾಜುವನ್ನು ತರಾಟೆಗೆ ತೆಗೆದುಕೊಂಡರು.
ಕೋವಿಡ್ ನಿಯಮಾವಳಿಗಳನ್ನು ಪಾಲನೆ ಮಾಡದೆ ಸಭಾಂಗಣದ ಒಳಗಡೆ ಯಾವುದೇ ಸಾಮಾಜಿಕ ಅಂತರ ಜಿಲ್ಲಾಧಿಕಾರಿ ಜಿ ಜಗದೀಶ್ ಗೆ ಕಾಣಸಿಗಲಿಲ್ಲ,
ಇದರಿಂದ ಗರಂ ಆಗಿರುವ ಜಿಲ್ಲಾಧಿಕಾರಿ ಜಿ ಜಗದೀಶ್ ಕುಂದಾಪುರ ಎಸಿ ಮತ್ತು ತಸಿಲ್ದಾರ್ ಮೇಲೆ ಕೆಂಡಾಮಂಡಲವಾದ್ರು.
ಸಂದೇಶ್ ಶೆಟ್ಟಿ ಆಜ್ರಿ ಪಬ್ಲಿಕ್ ನೆಕ್ಸ್ಟ್ ಉಡುಪಿ.
Kshetra Samachara
26/12/2020 12:04 pm