ಮುಲ್ಕಿ: ಕಳೆದ ಎರಡು ದಿನಗಳಿಂದ ಕಿನ್ನಿಗೋಳಿ ಸಮೀಪದ ಐಕಳ ಪೊಂಪೈ ಕಾಲೇಜಿನಲ್ಲಿ ಎರಡು ಕೋಮಿನ ನಡುವೆ ನಡೆದ ಸ್ಕಾರ್ಪ್-ಕೇಸರಿ ಶಾಲು ವಿವಾದವು ಸೌಹಾರ್ದತೆಯ ಮೂಲಕ ಬಗೆಹರಿದಿದೆ.
ಕಿನ್ನಿಗೋಳಿ ಸಮೀಪದ ಐಕಳ ಪಂಚಾಯತ್ ವ್ಯಾಪ್ತಿಯ ದಾಮಸ್ ಕಟ್ಟೆ ಬಳಿಯ ಪೊಂಪೈ ಕಾಲೇಜಿನಲ್ಲಿ ಮಂಗಳವಾರ ಸ್ಕಾರ್ಪ್-ಕೇಸರಿ ಶಾಲು ವಿವಾದ ಪ್ರಾರಂಭವಾಗಿದ್ದು ಕಾಲೇಜಿನಲ್ಲಿ ಅನ್ಯಕೋಮಿನ ವಿದ್ಯಾರ್ಥಿನಿಯರು ಸ್ಕಾರ್ಪ್ ಹಾಕಿ ತರಗತಿ ಹಾಜರಾದ ಕಾರಣ ಬುಧವಾರ ಹಿಂದೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕೇಸರಿ ಶಾಲು ಹಾಕಿ ತರಗತಿ ಹಾಜರಾಗಿ ಗೊಂದಲದ ವಾತಾವರಣ ಸೃಷ್ಟಿಯಾಗಿ ಬುಧವಾರ ಮಧ್ಯಾಹದ ಬಳಿಕ ಶಾಲೆಗೆ ರಜೆ ನೀಡಲಾಗಿತ್ತು.
ಗುರುವಾರ ಕೂಡ ಎರಡು ಕೋಮಿನವರು ಶಾಲು ಮತ್ತು ಸ್ಕಾರ್ಪ್ ಧರಿಸಿ ಕಾಲೇಜಿಗೆ ಹಾಜರಾಗಿದ್ದರು.
ಈ ನಡುವೆ ಕ್ಷಿಪ್ರ ಬೆಳವಣಿಗೆಯಲ್ಲಿ ಗುರುವಾರ ಸಂಜೆ ಕಾಲೇಜಿನಲ್ಲಿ ಜರಗಿದ ಕಾಲೇಜಿನ ಆಡಳಿತ ಮಂಡಳಿ,ಊರಿನ ಗಣ್ಯರು,ಪೊಲೀಸ್ ಇಲಾಖೆ ಮತ್ತು ಎರಡು ಧರ್ಮದ ಮುಖಂಡರ ಸಭೆಯಲ್ಲಿ ಕಾಲೇಜಿಗೆ ಸೇರುವಾಗ ವಿದ್ಯಾರ್ಥಿಗಳು ಒಪ್ಪಿ ಕೊಂಡ ನಿಯಮದಂತೆ ಡ್ರೆಸ್ ಕೋಡ್ ಪಾಲಿಸಬೇಕು ಹಾಗೂ ನಿಯಮ ಮೀರುವ ಹಾಗೆ ಇಲ್ಲ ಎಂಬ ನಿರ್ಧಾರದ ಬಗ್ಗೆ ಎರಡು ಧರ್ಮದವರು ಒಪ್ಪಿಕೊಂಡ ಬಳಿಕ ವಿವಾದ ಸೌರ್ಹದಯುತವಾಗಿ ಬಗೆಹರಿದಿದೆ.
Kshetra Samachara
06/01/2022 09:47 pm