ಸರಕಾರದ ಆದಿ ಸೂಚನೆಯಂತೆ ಜು.1 ರಿಂದ ಏಕ ಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳನ್ನು ನಿಷೇಧಿಸಿ ಆದೇಶ ಹೊರಡಿಸಿದ್ದು ಪೂರ್ವಭಾವಿಯಾಗಿ ಕಿನ್ನಿಗೋಳಿ ಪಟ್ಟಣ ಪಂಚಾಯತ್ ನಲ್ಲಿ ನಾಗರಿಕರ ಹಾಗೂ ಅಂಗಡಿ ಮಾಲಿಕರ ಸಮಾಲೋಚನಾ ಸಭೆ ನಡೆಯಿತು, ಸಭೆಯಲ್ಲಿ ಕಿನ್ನಿಗೊಳಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸಾಯಿಶ್ ಚೌಟ ಮಾತನಾಡಿ ಸರಕಾರದ ಆದೇಶದಂತೆ ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲೂ ಪ್ಲಾಸ್ಟಿಕ್ ನಿಷೇದಕ್ಕೆ ಮುಂದಾಗಬೇಕು, ಪ್ಲಾಸಿಕ್ ನಮಗೆ ಮಾರಕವಾಗಿದ್ದು, ಪ್ಲಾಸ್ಟಿಕ್ ಮಣಿನಲ್ಲಿ ಕರಗದ ಕಾರಣ ಹಾನಿಕಾರಕವಾಗಿದ್ದು ಕ್ಯಾನ್ಸರ್ ನಂತಹ ಮಾರಕ ರೋಗಗಳಿಗೆ ಕಾರಣವಾಗುತ್ತಿದೆ.
ಕಿನ್ನಿಗೋಳಿಯಲ್ಲಿ ತಿಂಗಳಿಗೆ 1000 ಕಿಲೋ ನಷ್ಟು ಪ್ಲಾಸ್ಟಿಕ್ ಸಂಗ್ರಹಣೆಯಾಗುತ್ತದೆ, ಕಿನ್ನಿಗೋಳಿ ವ್ಯಾಪ್ತಿಯಲ್ಲಿ ಸುಮಾರು ಶೇಖಡ 40 ರಷ್ಟು ತ್ಯಾಜ್ಯ ಸಂಗ್ರಹಣೆಯಾಗುತ್ತಿದ್ದು ಪೂರ್ತಿ ಸಂಗ್ರಹಣೆಯಾದರೆ ಪ್ಲಾಸ್ಟಿಕ್ ತ್ಯಾಜ್ಯ ಇನ್ನಷ್ಟು ಹೆಚ್ಚುತ್ತದೆ, ಒಂದು ನೀರಿನ ಬಾಟಲ್ 450 ವರ್ಷ, ಆರು ಲೇಯರ್‌ನ ಬೆಲ್ಟ್ 1000 ವರ್ಷ ಕಳೆದರೂ ಮಣ್ಣಾಗುದಿಲ್ಲ, ಹೀಗೆ ಅನೇಕ ವಸ್ತುಗಳು ಮಣ್ಣಾಗದೆ ನಮಗೆ ಹಾನಿಕಾರಕವಾಗಿದೆ.
100 ಮೈಕ್ರೋನ್ ಗಿಂತ ಕಡಿಮೆಯ ಎಲ್ಲಾ ಪ್ಲಾಸ್ಟಿಕ್ ಗಳನ್ನು ನಿಷೇಧಿಸಲು ಸರಕಾರ ಮುಂದಾಗಿದೆ. ಥರ್ಮಕೋಲ್, ಪ್ಲಾಸ್ಟಿಕ್ ಪ್ಲೇಟ್, ಪ್ಲಾಸ್ಟಿಕ್ ಕಪ್ ಮತ್ತು ಗ್ಲಾಸ್, ಕ್ಯಾಂಡಿ ಕಡ್ಡಿ, ಪ್ಲಾಸ್ಟಿಕ್ ಸ್ಟ್ರಾ , ಪ್ಲಾಸ್ಟಿಕ್ ಚಮಚ, ಪ್ಲಾಸ್ಟಿಕ್ ಬ್ಯಾನರ್ ಇನ್ನಿತರ ರೀತಿಯ ಪ್ಲಾಸ್ಟಿಕ್ ನಿಷೇದಕ್ಕೆ ಸರಕಾರ ಮುಂದಾಗಿದೆ ಎಂದರು,
ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 600 ಕ್ಕಿಂತಲೂ ಹೆಚ್ಚು ವ್ಯಾಪಾರ ಕೇಂದ್ರಗಳಿದ್ದು ಹಲವು ವ್ಯಾಪಾರಿಗಳು, ಸಂಘ ಸಂಸ್ಥೆಯ ಪ್ರಮುಖರಾದ ಭುವನಾಭಿರಾಮ ಉಡುಪ, ಸಂತಾನ್ ಡಿಸೋಜಾ, ಲಕ್ಷ್ಮಣ್ ಸಾಲ್ಯಾನ್ ಹಾಗೂ ಬಾಗವಹಿಸಿ ಸಲಹೆ ಸೂಚನೆ ನೀಡಿದರು.
Kshetra Samachara
29/06/2022 01:25 pm