ತಾಲೂಕಿನ ಬೆಳ್ಳಾರೆಯಲ್ಲಿ ಗಣೇಶೋತ್ಸವದ ಆಚರಣೆ ಸಂದರ್ಭದಲ್ಲಿ ಶಾಂತಿ, ಸುವ್ಯವಸ್ಥೆಯನ್ನು ಕಾಪಾಡುವ ಸಂಕೇತವಾಗಿ ಸೋಮವಾರ ಪೊಲೀಸರಿಂದ ಪಥ ಸಂಚಲನ ನಡೆಯಿತು.
ಡಿವೈಎಸ್ಪಿ ವೀರಯ್ಯ ಹಿರೇಮಠ, ಸುಳ್ಯ ಸರ್ಕಲ್ ಇನ್ಸ್ ಪೆಕ್ಟರ್ ನವೀನಚಂದ್ರ ಜೋಗಿ, ಬೆಳ್ಳಾರೆ ಎಸ್.ಐ.ಸುಹಾಸ್ ನೇತೃತ್ವದಲ್ಲಿ ಪೊಲೀಸರು ಬೆಳ್ಳಾರೆ ಪೊಲೀಸು ಠಾಣೆಯಿಂದ ಮಾಸ್ತಿಕಟ್ಟೆಯವರೆಗೆ ಅಲ್ಲಿಂದ ಕೆಳಗಿನ ಪೇಟೆ ದೇವಸ್ಥಾನದವರೆಗೆ ಪಥಸಂಚಲನ ನಡೆಸಿದರು. ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
Kshetra Samachara
29/08/2022 03:39 pm