ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಮುಂದಿನ ದಿನಗಳಲ್ಲಿ ಸರಣಿ ಶಾಂತಿಸಭೆ; ಎಜಿಡಿಪಿ

ಎರಡು ವಾರಗಳಿಂದ ದ.ಕ.ಜಿಲ್ಲೆಯಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಕರೆದಿರುವ ಶಾಂತಿ ಸಭೆಯು ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಿತು. ಎಜಿಡಿಪಿ ಅಲೋಕ್ ಕುಮಾರ್, ಐಜಿ ದೇವಜ್ಯೋತಿ ರೇ, ಡಿಸಿ ಡಾ.ಕೆ.ವಿ.ರಾಜೇಂದ್ರ, ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್, ಎಸ್ಪಿ ಋಷಿಕೇಶ ಸೋಣಾವಣೆ, ಉಪ ಪೊಲೀಸ್ ಆಯುಕ್ತರುಗಳ ನೇತೃತ್ವದಲ್ಲಿ ಶಾಂತಿಸಭೆ ನಡೆಯಿತು.

ಎಜಿಡಿಪಿ ಅಲೋಕ್ ಕುಮಾರ್ ಮಾತನಾಡಿ, ಮುಂದಿನ ದಿನಗಳಲ್ಲಿ ಸೂಕ್ಷ್ಮ ಪ್ರದೇಶಗಳಲ್ಲಿ ನಿರಂತರವಾಗಿ ಶಾಂತಿಸಭೆಯನ್ನು ನಡೆಸಲಾಗುತ್ತದೆ. ಬೀಟ್ ಕಮಿಟಿ, ಮೊಹಲ್ಲಾ ಸಮಿತಿ, ಯುವ ಸಮಿತಿ ರಚಿಸಿ ದ.ಕ.ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲಾಗುತ್ತದೆ ಎಂದು ಹೇಳಿದರು.

ಶಾಂತಿಸಭೆಯಲ್ಲಿ ಹಲವರಿಂದ ಬೇರೆ ಬೇರೆ ಅಭಿಪ್ರಾಯಗಳು ವ್ಯಕ್ತವಾಗಿದೆ‌. ಪ್ರಚೋದನಕಾರಿ ಭಾಷಣ ಮಾಡುವವರನ್ನು ಕಾನೂನಿನಡಿ ಪ್ರಕರಣ ದಾಖಲಿಸಬೇಕು. ಗಾಂಜಾ, ಜೂಜು, ಪಬ್ ಹಾಗೂ ಹುಕ್ಕಾ ಬಾರ್ ಗಳ ಚಟುವಟಿಕೆಗಳನ್ನು ನಿಯಂತ್ರಣ ಮಾಡಬೇಕು. ಮಾಧ್ಯಮಗಳು ಸುಳ್ಳು ಸುದ್ದಿ ಪ್ರಕಟಿಸುವುದು, ಸುದ್ದಿಗಳ ವೈಭವೀಕರಣ ಮಾಡೋದನ್ನು ನಿಯಂತ್ರಣ ಮಾಡಬೇಕು ಸೇರಿದಂತೆ ಸಾಕಷ್ಟು ಸಲಹೆಗಳು ಬಂದಿವೆ‌. ಪ್ರಚೋದನಕಾರಿ ಭಾಷಣಗಳ ಬಗ್ಗೆ ದೂರು ಬಂದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು‌.

ಈ ಶಾಂತಿಸಭೆಯಲ್ಲಿ ವಿವಿಧ ಪಕ್ಷದ ಮುಖಂಡರು, ವಿವಿಧ ಧರ್ಮಗಳ, ಸಮುದಾಯಗಳ ಮುಖಂಡರು, ಪೊಲೀಸ್ ಅಧಿಕಾರಿಗಳು, ಸರಕಾರಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು‌.

Edited By :
Kshetra Samachara

Kshetra Samachara

30/07/2022 07:30 pm

Cinque Terre

20.39 K

Cinque Terre

3

ಸಂಬಂಧಿತ ಸುದ್ದಿ