ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ನವೀನ್ ಮೃತದೇಹ ತರುವ ಪ್ರಯತ್ನವನ್ನು ಕೇಂದ್ರ ಸರಕಾರ ಮಾಡುತ್ತಿದೆ: ಸಚಿವೆ ಶೋಭಾ

ಮಣಿಪಾಲ: ಉಕ್ರೇನ್ ನಲ್ಲಿ ಸಾವನ್ನಪ್ಪಿದ್ದ ನವೀನ್ ಮೃತದೇಹವನ್ನು ಅಲ್ಲಿಂದ ತರುವ ಪ್ರಯತ್ನಗಳು ನಡೆಯುತ್ತಿವೆ. ಅಲ್ಲಿ ಅವರ ಮೃತದೇಹವನ್ನು ಕಾಯ್ದಿರಿಸಲಾಗಿದೆ ಎಂದು ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಉಡುಪಿಯಲ್ಲಿ ಮಾತನಾಡಿದ ಸಚಿವರು ಉಕ್ರೇನ್ ನಲ್ಲಿ ಈಗಲೂ ಯುದ್ಧ ನಡೆಯುತ್ತಿದೆ.ಆದ್ದರಿಂದ ಯುದ್ಧಪೀಡಿತ ರಾಷ್ಟ್ರದಿಂದ ಮೃತದೇಹ ತರುವುದು ಅಷ್ಟು ಸುಲಭದ ಕೆಲಸ ಅಲ್ಲ. ಅಲ್ಲಿ ಅನಾರೋಗ್ಯದಿಂದ ಸಾವನ್ನಪ್ಪಿದ ಯುವಕನ ಮೃತದೇಹವನ್ನು ತರಲಾಗಿದೆ. ಆದರೆ ನವೀನ್ ಶವ ತರಲು ಪ್ರಯತ್ನಗಳು ನಡೆಯುತ್ತಿವೆ ಎಂದರು.

ಕೇಂದ್ರ ಸರ್ಕಾರ ಅಲ್ಲಿದ್ದ 20 ಸಾವಿರದಷ್ಟು ಜನರನ್ನು ಬೇರೆ ಬೇರೆ ರಾಷ್ಟ್ರಗಳ ನೆರವಿನಿಂದ ಕರೆತಂದಿದೆ. ಆದರೆ ಮೃತದೇಹದ ವಿಷಯದಲ್ಲಿ ಸ್ವಲ್ಪ ತಡವಾಗಿದೆ. ಈ ಸಂಬಂಧ ಕೇಂದ್ರ ಸಚಿವ ಸಂಪುಟ ಸಭೆಯಲ್ಲೂ ನಿರ್ಣಯ ಆಗಿದೆ. ಮೃತದೇಹವನ್ನು ತಾಯ್ನಾಡಿಗೆ ತರುವ ಬಗ್ಗೆ ಎಲ್ಲಾ ಪ್ರಯತ್ನಗಳನ್ನೂ ಸರಕಾರ ಮಾಡುತ್ತಿದೆ ಎಂದು ಹೇಳಿದ್ದಾರೆ.

Edited By : Manjunath H D
PublicNext

PublicNext

18/03/2022 12:29 pm

Cinque Terre

48.32 K

Cinque Terre

4

ಸಂಬಂಧಿತ ಸುದ್ದಿ