ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುತ್ತೂರು: ಅಡಿಕೆಗೆ ರೋಗಬಾಧೆ, ಬೆಳೆಗಾರರ ಸಂಕಷ್ಟಕ್ಕೆ ಸರಕಾರ ಸ್ಪಂದನೆ; ಸಚಿವ ಅಂಗಾರ

ಪುತ್ತೂರು: ಹಳದಿ ರೋಗದಿಂದ ಕಂಗೆಟ್ಟ ಅಡಿಕೆ ಬೆಳೆಗಾರರ ಸಂಕಷ್ಟಕ್ಕೆ ಸರಕಾರ ಸ್ಪಂದಿಸಿದ್ದು, ಈ ನಿಟ್ಟಿನಲ್ಲಿ ಪರ್ಯಾಯ ವ್ಯವಸ್ಥೆ ಕೈಗೊಳ್ಳಲಾಗುವುದು ಎಂದು ಸಚಿವ ಎಸ್.ಅಂಗಾರ ಭರವಸೆ ನೀಡಿದ್ದಾರೆ.

ದ.ಕ. ಜಿಲ್ಲೆಯ ಸುಳ್ಯ, ಪುತ್ತೂರಿನ ನೂರಾರು ಎಕರೆ ಪ್ರದೇಶದ ಅಡಿಕೆ ತೋಟದಲ್ಲಿ ಹಳದಿ ರೋಗ ಕಾಣಿಸಿದ್ದು, ಈ ಬಗ್ಗೆ ತೋಟಗಾರಿಕೆ ಸಚಿವರಲ್ಲೂ ಮಾತನಾಡಿದ್ದೇನೆ ಎಂದ ಅಂಗಾರ, ಹಳದಿ ರೋಗಕ್ಕೆ ಸಂಬಂಧಿಸಿ 10 ದಿನಗಳ ಒಳಗೆ ತೋಟಗಾರಿಕೆ ಸಚಿವರೇ ಜಿಲ್ಲೆಯಲ್ಲಿ ಸಭೆ ನಡೆಸಲಿದ್ದಾರೆ. ಈ ಕೃಷಿಕರಿಗೆ ಪರ್ಯಾಯ ಕೃಷಿಯನ್ನೂ ಪರಿಚಯಿಸುವ ಕಾರ್ಯವನ್ನು ಮೀನುಗಾರಿಕೆ, ಒಳನಾಡು ಸಾರಿಗೆ ಇಲಾಖೆ ಮೂಲಕ ಮಾಡಲಾಗುವುದು ಎಂದರು.

ಮೀನಿನ ತಳಿ ಮಡೆಂಜಿ ಸಹಿತ ವಿವಿಧ ತಳಿಗಳ ಅಭಿವೃದ್ಧಿಗೆ ಪೂರಕ ವ್ಯವಸ್ಥೆ ಮಾಡುವ ಜೊತೆಗೆ ಮೀನು ಸಾಕಾಣಿಕೆಗೂ ವಿಶೇಷ ಒತ್ತು ನೀಡಲಾಗಿದ್ದು, ಈ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿ ಮುಂದಿನ 15 ದಿನಗಳಲ್ಲಿ ಕಾರ್ಯಾಗಾರ ನಡೆಸಲಾಗುವುದು. ಅಲ್ಲದೆ, ಅಡಿಕೆ ಜೊತೆಗೆ ಮೀನು, ಮುತ್ತು, ಪಾಚಿ ಕೃಷಿ ಮಾಡಲೂ ಪ್ರೋತ್ಸಾಹ ನೀಡಲಾಗುವುದು ಎಂದರು.

Edited By : Manjunath H D
Kshetra Samachara

Kshetra Samachara

01/01/2022 02:42 pm

Cinque Terre

8.31 K

Cinque Terre

0

ಸಂಬಂಧಿತ ಸುದ್ದಿ