ಸುಬ್ರಹ್ಮಣ್ಯ: ಕಸ್ತೂರಿ ರಂಗನ್ ವರದಿ ಕೈ ಬಿಡುವಂತೆ ಇನ್ನೊಮ್ಮೆ ಸರಕಾರವನ್ನು ಒತ್ತಾಯಿಸಲು ಗ್ರಾಮಮಟ್ಟದಿಂದಲೇ ಉಗ್ರ ಹೋರಾಟ
ನಡೆಸಲಾಗುವುದೆಂದು ಬಿಳಿನೆಲೆ ಪ್ರಾ. ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಮಲೆನಾಡು ಹಿತರಕ್ಷಣಾ ವೇದಿಕೆ ಕಾರ್ಯಕರ್ತರ ಸಮಾಲೋಚನೆ ಸಭೆಯಲ್ಲಿ ತೀರ್ಮಾನಿಸಲಾಯಿತು.
ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಮಾತನಾಡಿ, ದ.ಕ. ಜಿಲ್ಲೆಯ ಮೂರು ತಾಲೂಕುಗಳ ವರದಿಯಲ್ಲಿ ಉಲ್ಲೇಖಿಸಿರುವ ಗ್ರಾಮಸ್ಥರನ್ನು ಸೇರಿಸಿಕೊಂಡು ಆಯಾ ಗ್ರಾಪಂಗೆ ಮನವಿ ನೀಡಿ ಗ್ರಾಮ ಮಟ್ಟದಿಂದಲೇ ವರದಿ ವಿರುದ್ಧ ಇನ್ನೊಂದು ಹೋರಾಟ ಆರಂಭಿಸಲಿದ್ದೇವೆ. ಕೃಷಿಕರಿಗೆ ಮಾರಕವಾಗಿರುವ ಕಸ್ತೂರಿರಂಗನ್ ವರದಿ ವಿರುದ್ಧ ಗ್ರಾಮ, ತಾಲೂಕು ಕಚೇರಿ ಎದುರು ಧರಣಿ ನಡೆಸಿ ಮನವಿ ನೀಡಲಾಗುವುದು. ನವೆಂಬರ್ ಕೊನೆ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಸಹಾಯಕ ಆಯುಕ್ತರ ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.
Kshetra Samachara
24/10/2020 09:54 am