ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಮಿಸ್ ಇಂಡಿಯಾ-2022 ಸಿನಿ ಶೆಟ್ಟಿಗೆ ಹುಟ್ಟೂರಲ್ಲಿ ಅದ್ಧೂರಿ ಸ್ವಾಗತ

ಉಡುಪಿ: ಮಿಸ್ ಇಂಡಿಯಾ-2022 ಕಿರೀಟ ಮುಡಿಗೇರಿಸಿಕೊಂಡಿರುವ ಬೆಳ್ಳಂಪಳ್ಳಿ ಸಿನಿ ಶೆಟ್ಟಿ ಅವರಿಗೆ ಬಂಟರ ಯಾನೆ ನಾಡವರ ಮಾತೃ ಸಂಘದ ವತಿಯಿಂದ ಇಂದು ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಹುಟ್ಟೂರ ಸನ್ಮಾನ ನಡೆಯಲಿದೆ.

ಸಂಗೀತ ನಿರ್ದೇಶಕ ಗುರುಕಿರಣ್ ಮುಖ್ಯ ಅತಿಥಿಗಳಾಗಿರುವರು. ಸಮಾರಂಭಕ್ಕೂ ಮುನ್ನ 12 ಗಂಟೆಗೆ ಸಿನಿ ಶೆಟ್ಟಿ ಅವರನ್ನು ಜೋಡುಕಟ್ಟೆಯಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು. ಬಳಿಕ ಮೆರವಣಿಗೆ ಮೂಲಕ ಸಭಾಮಂಟಪಕ್ಕೆ ಕರೆತರಲಾಯಿತು. ಇಲ್ಲಿ ಸನ್ಮಾನ ಕಾರ್ಯಕ್ರಮ ಆಯೋಜನೆಗೊಂಡಿದೆ.

ತಾಯಿ ಹೇಮಾ ಶೆಟ್ಟಿ ಅವರ ಉಡುಪಿ ಸಮೀಪದ ಬೆಳ್ಳಂಪಳ್ಳಿ ಮನೆಗೆ ಸೋಮವಾರ ಸಾಯಂಕಾಲ ಆಗಮಿಸಿರುವ ಸಿನಿ ಶೆಟ್ಟಿ ಇಂದು ಸಾಯಂಕಾಲ 5.30ಕ್ಕೆ ಬೆಳ್ಳಂಪಳ್ಳಿಯಲ್ಲಿರುವ ಭೂತರಾಜ ದೇವಸ್ಥಾನಕ್ಕೆ ಭೇಟಿ ನೀಡಿ, ಮುಂದಿನ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಯಶಸ್ಸಿಗಾಗಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ನಂತರ ಅವರು ತಂದೆ ಸದಾನಂದ ಶೆಟ್ಟಿ ಅವರ ಇನ್ನಂಜೆ ಮುಡುಂಬು ಮನೆಗೆ ತೆರಳಲಿದ್ದಾರೆ.

Edited By : Shivu K
Kshetra Samachara

Kshetra Samachara

19/07/2022 02:39 pm

Cinque Terre

11.24 K

Cinque Terre

0