ಉಡುಪಿ: ಪ್ರಸಿದ್ಧ ಸಂಗೀತ ವಿದ್ವಾಂಸ ಟಿ.ಎಂ.ಕೃಷ್ಣನ್ ಅವರು ಇಂದು ಉಡುಪಿಯ ಶ್ರೀಕೃಷ್ಣ ದೇವರ ದರ್ಶನ ಪಡೆದರು. ಬಳಿಕ ಇಲ್ಲಿ ನಾನು ಹಾಡಬಹುದೇ ? ಎಂದು ಕೇಳಿದ್ದಾರೆ.
ಅಲ್ಲಿದ್ದವರು ಖುಷಿಯಿಂದಲೇ ಗಾನಲೋಲ ಶ್ರೀ ಕೃಷ್ಣನ ಸಂಗೀತ ಸೇವೆ ಮಾಡಿ ಎಂದು ಹೇಳಿದರು. ಕೂಡಲೇ " ಕೃಷ್ಣಾ ನೀ ಬೇಗನೇ ಬಾರೋ" ಹಾಗೂ "ಬಾರೋ ಕೃಷ್ಣಯ್ಯ" ಕೀರ್ತನೆಗಳನ್ನು ಭಕ್ತಿಭಾವದಿಂದ ಹಾಡಿ ಶ್ರೀಕೃಷ್ಣನಿಗೆ ಸಮರ್ಪಿಸಿದರು. ಈ ವೇಳೆ ಭಕ್ತಾದಿಗಳು ಖ್ಯಾತ ಗಾಯಕನ ಗಾನ ಮಾಧುರ್ಯದ ಖುಷಿ ಅನುಭವಿಸಿದರು.
Kshetra Samachara
24/03/2022 01:23 pm