ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಕ್ಷಿಕೆರೆ: ಸತ್ಕಾರ್ಯ ನಮ್ಮ ಚಿಂತನೆಯಾಗಬೇಕು; ಶ್ರೀ ವಿದ್ಯೇಂದ್ರ ತೀರ್ಥ ಸ್ವಾಮೀಜಿ

ಮುಲ್ಕಿ: ಸಾಮಾಜಿಕ ಕಾರ್ಯಗಳ ಮೂಲಕ ಸಂಘಟನೆ ಬಲಗೊಳಿಸಲು ಸಾಧ್ಯವಿದ್ದು, ಸತ್ಕಾರ್ಯಗಳು ನಮ್ಮ ಚಿಂತನೆಯಾಗಬೇಕೆಂದು ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.

ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜರುಗಿದ ಶಿವಳ್ಳಿ ಸ್ಪಂದನ ಮಂಗಳೂರಿನ ಕಟೀಲು ವಿಭಾಗದ ಯುವ ಘಟಕದ ಉದ್ಘಾಟನೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಆನ್ ಲೈನ್ ಮುಖಾಂತರ ನಡೆದ ತಾಲೂಕು ಮಟ್ಟದ ಕೃಷ್ಣವೇಷ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಪವರ್ ಲಿಫ್ಟಿಂಗ್ ನಲ್ಲಿ ಸಾಧನೆಗೈದ ಋತ್ವಿಕ ಅಲೆವೂರಾಯ, ಶ್ಲೋಕಗಳನ್ನು ಹೇಳುವ ಮೂಲಕ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಮಾಡಿರುವ ಸಂವಿತ್ ಭಾರ್ಗವ ಭಟ್ ಹಾಗೂ ಶೈಕ್ಷಣಿಕ ಸಾಧಕರನ್ನು ಗೌರವಿಸಲಾಯಿತು.

ಉಡುಪಿಯ ಪೆರಂಪಳ್ಳಿ ವಾಸುದೇವ ಭಟ್ ದಿಕ್ಸೂಚಿ ಭಾಷಣ ಮಾಡಿದರು. ಕಟೀಲು ದೇವಳದ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ಸುರಗಿರಿ ದೇಗುಲದ ಅರ್ಚಕ ವಿಶ್ವೇಶ ಭಟ್, ಶಿವಳ್ಳಿ ಸ್ಪಂದನ ಜಿಲ್ಲಾಧ್ಯಕ್ಷ ಡಾ. ದಯಾಕರ್, ತಾಲೂಕು ಅಧ್ಯಕ್ಷ ಕೃಷ್ಣಭಟ್, ಅಗರಿ ಸಂಸ್ಥೆಯ ರಾಘವೇಂದ್ರ ರಾವ್, ಕದ್ರಿ ರಾಮಚಂದ್ರ ಭಟ್, ಬಾಲಚಂದ್ರ ಭಟ್, ಶಿಬರೂರು ವೇದವ್ಯಾಸ ತಂತ್ರಿ, ಅನಂತರಾಮ ಭಟ್, ಶಿಬರೂರು ಸುಬ್ರಹ್ಮಣ್ಯ ರಾವ್, ಕಟೀಲು ಘಟಕ ಅಧ್ಯಕ್ಷ ಅನಂತಪದ್ಮನಾಭ ಆಚಾರ್ಯ , ಡಾ.ಗುರುರಾಜ ಉಡುಪ ಮತ್ತಿತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

03/11/2021 04:09 pm

Cinque Terre

1.25 K

Cinque Terre

0