ಮುಲ್ಕಿ: ಮುಲ್ಕಿ ಒಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಸೋಮವಾರ ಶ್ರೀ ದೇವರ ಸನ್ನಿಧಿಯಲ್ಲಿ 17ನೇ ವರ್ಷದ “ಏಕಾಹ ಭಜನೆ”ಕಾರ್ಯಕ್ರಮ ನಡೆಯಿತು. ಪ್ರಾತಃಕಾಲ 6.15 ಕ್ಕೆ ಶ್ರೀ ದೇವರ ಸನ್ನಿಧಿಯಲ್ಲಿ ದೇವಸ್ಥಾನದ ಅರ್ಚಕ ವೇದಮೂರ್ತಿ ಪದ್ಮನಾಭ ಭಟ್ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನಡೆದು ಅರ್ಚಕ ವೆಂಕಟೇಶ್ ಭಟ್ ದೀಪ ಪ್ರಜ್ವಲನೆ ಮೂಲಕ ಏಕಾಹ ಭಜನೆಗೆ ಚಾಲನೆ ನೀಡಿದರು.
ಈ ಸಂದರ್ಭ ಅರ್ಚಕ ವೇದಮೂರ್ತಿ ಪದ್ಮನಾಭ ಭಟ್ ಮಾತನಾಡಿ ಭಜನೆಯ ಮುಖಾಂತರ ಲೋಕದ ಸರ್ವ ದುರಿತಗಳು ನಾಶವಾಗಿ ಶಾಂತಿ ನೆಲೆಸಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭ ಅರ್ಚಕ ಪೃಥ್ವಿಶ್ ಭಟ್, ಹಿರಿಯ ಪ್ರಬಂಧಕ ಸುರೇಂದ್ರ ಶೆಣೈ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು, ಭಜಕ ವೃಂದ, ಭಕ್ತಾದಿಗಳು ಉಪಸ್ಥಿತರಿದ್ದರು.
ಏಕಾಹ ಭಜನಾ ಕಾರ್ಯಕ್ರಮ ಸೋಮವಾರ ಬೆಳಿಗ್ಗೆ ಆರಂಭಗೊಂಡು ಮಂಗಳವಾರ ಬೆಳಿಗ್ಗೆ 6-15 ಕ್ಕೆ ಮಂಗಲೋತ್ಸವ ನಡೆಯಲಿದೆ.
Kshetra Samachara
01/11/2021 10:28 am