ವರದಿ: ರಹೀಂ ಉಜಿರೆ
ಮಲ್ಪೆ; ಪ್ರವಾಸಿಗರ ಸ್ವರ್ಗ ಉಡುಪಿಯ ಮಲ್ಪೆ ಬೀಚ್ ಮತ್ತಷ್ಟು ರಂಗೇರಿದೆ. ಇಷ್ಟು ದಿನ ದಡದಲ್ಲಿ ಅಲೆಗಳ ಜೊತೆಗೆ ಆಟವಾಡುತ್ತಿದ್ದ ಪ್ರವಾಸಿಗರು, ಈಗ ಕಡಲ ಮಧ್ಯೆ ಜಾಲಿ ಮೂಡ್‌ನಲ್ಲಿದ್ದಾರೆ. ಬೀಚ್ ನಲ್ಲೀಗ ವಾಟರ್ ಸ್ಪೋರ್ಟ್ಸ್ ಪ್ರಾರಂಭಗೊಂಡಿರುವುದರಿಂದ ಟೂರಿಸ್ಟ್ ಮಸ್ತ್ ಎಂಜಾಯ್ ಮಾಡ್ತಿದ್ದಾರೆ.
ಬನಾನಾ ಬೋಟ್‌ನಲ್ಲಿ ಜಾಲಿ ರೈಡ್ , ಜಟ್ಸ್‌ಕೀಯಲ್ಲಿ ವೀಲಿಂಗ್ , ಜಾರ್ಬಿಂಗ್‌ನಲ್ಲಿ ಉರುಲಾಟ, ಪ್ಯಾರಾಚೂಟ್‌ನಲ್ಲಿ ಬಾನಲ್ಲಿ ಹಾರಾಟ.... ಅಬ್ಬಾ ಅದೇನ್ ಖುಷಿ.. ಅದೇನ್ ಸಂಭ್ರಮ ಅಂತೀರಾ.. ಇದು ಮಲ್ಪೆ ಬೀಚ್‌ನಲ್ಲಿ ವಾಟರ್ ಸ್ಪೋರ್ಟ್ಸ್‌ನ ಅಂದ ಚಂದ.
ದೂರದ ಊರುಗಳಿಂದ ಬರುವ ಪ್ರವಾಸಿಗರಿಗೆ ಸಮುದ್ರದಲ್ಲಿ ವಾಟರ್ ಸ್ಪೋರ್ಟ್ಸ್ ಅಂದ್ರೆ ತುಂಬಾನೇ ಕ್ರೇಝ್. ಸಮುದ್ರ ಮಧ್ಯೆ ವಾಟರ್ ಸ್ಪೋರ್ಟ್ಸನಲ್ಲಿ ಜಾಲಿ ರೈಡ್ ಮಾಡೋದು ಅಂದ್ರೆ ಸಖತ್ ಖುಷಿ. ಹೀಗಾಗಿ ಬಹು ಬೇಡಿಕೆ ಇರೋ ವಾಟರ್ ಸ್ಪೋರ್ಟ್ಸ್ ಇತ್ತೀಚೆಗೆ ಆರಂಭಗೊಂಡಿದೆ. ಸಾಲು ಸಾಲು ರಜೆ ಕಾರಣ ಪ್ರವಾಸಿಗರು ರಜೆಯ ಮಜಾವನ್ನು ಮಲ್ಪೆಯಲ್ಲಿ ಕಳೆಯುತ್ತಿದ್ದಾರೆ..
ಉಡುಪಿಗೆ ಬರುವ ಪ್ರವಾಸಿಗರು ಬೀಚ್ ವಾಟರ್ ಸ್ಪೋರ್ಟ್ಸ್ ನಲ್ಲಿ ಮಜಾ ಮಾಡುತ್ತಿದ್ದಾರೆ. ಒಂದಷ್ಟು ಹೊತ್ತು ಸಮುದ್ರದಲ್ಲಿ ಆಟವಾಡುತ್ತಾ ಮನಸನ್ನು ಉಲ್ಲಾಸಗೊಳಿಸುತ್ತಿದ್ದಾರೆ.
Kshetra Samachara
05/11/2021 11:59 am