ಕಟೀಲು: ಇತಿಹಾಸ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಚಲನಚಿತ್ರ ನಟಿ ರಕ್ಷಿತಾ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಕ್ಷೇತ್ರದ ಅರ್ಚಕ ಹರಿನಾರಾಯಣ ಆಸ್ರಣ್ಣ ವಿಶೇಷ ಪ್ರಾರ್ಥನೆ ಸಲ್ಲಿಸಿ ನಟಿ ರಕ್ಷಿತಾ ರವರಿಗೆ ಪ್ರಸಾದ ನೀಡಿದರು.
ಬಳಿಕ ದೇವಸ್ಥಾನದಲ್ಲಿ ನೆಚ್ಚಿನ ನಟಿಯನ್ನು ನೋಡಿ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದರು.
ಆದರೆ ಇದರಿಂದ ಯಾವುದೇ ವಿಚಲಿತರಾಗದೆ ರಕ್ಷಿತಾ ಎಲ್ಲರ ಜೊತೆ ಫೋಟೋ ತೆಗೆಸಿಕೊಂಡರು. ಈ ಸಂದರ್ಭ ದೇವಸ್ಥಾನದ ಮ್ಯಾನೇಜರ್ ತಾರಾನಾಥ್ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
PublicNext
29/05/2022 05:30 pm