ಮುಲ್ಕಿ: ಹಲವರು ಹಲವು ರೀತಿಯ ಹವ್ಯಾಸವನ್ನು ಮೈಗೂಡಿಸಿಕೊಳ್ಳುವದು ಸಾಮಾನ್ಯ, ಆದರೆ ಅವರು ಮೈಗೂಡಿಸಿದ ಹವ್ಯಾಸ ಮಾತ್ರ ಭಿನ್ನವಾಗಿರುತ್ತದೆ ಇಲ್ಲೊಬ್ಬ ನಿವೃತ್ತ ಶಿಕ್ಷಕರು ಬೆಂಕಿಪೆಟಿಗೆಯನ್ನು ಸಂಗ್ರಹಿಸುವ ಹವ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ,
ಕಿನ್ನಿಗೋಳಿಯ ನಿವೃತ್ತ ಶಿಕ್ಷಕ ಬಾಲಕೃಷ್ಣ ಉಡುಪ ರವರು ಕಳೆದ ಮೂವತ್ತು ವರುಷಗಳಿಂದ ಬೇರೆ ಬೇರೆ ಕಂಪನಿಯ ಬೆಂಕಿಪೆಟ್ಟಿಗೆ ಕವರ್ ಸಂಗ್ರಹಿಸುತ್ತಿದ್ದು ಇದೀಗ ಇವರ ಬಳಿ ಸುಮಾರು 700ಕ್ಕಿಂತಲೂ ಅಧಿಕ ಕಂಪನಿಯ ಬೆಂಕಿ ಪೆಟ್ಟಿಗೆಗಳಿವೆ, ಮನೆಯಲ್ಲಿ ಉಪಯೋಗಿಸಿದ ಅಥವಾ ರಸ್ತೆ ಬದಿಯಲ್ಲಿ ಸಿಕ್ಕ ಬೆಂಕಿಪೆಟ್ಟಿಗೆಗಳನ್ನು ಸಂಗ್ರಹಿಸುವ ಹವ್ಯಾಸವನ್ನು ಮೈಗೂಡಿಸಿದ್ದಾರೆ,
ಅಲ್ಲದೇ ಅವರ ಬಳಿ ಅಂಚೆ ಚೀಟಿ ಕಥೆಗಳ ಸಂಗ್ರಹ ಹಳೆಯ ಅಂಚೆ ಕವರ್ ಸಂಗ್ರಹ, ಬೇರೆ ಬೇರೆ ಲೇಖನಗಳ ಪೇಪರ್ ಕಟ್ಟಿಂಗ್ ಹೀಗೆ ಹತ್ತು ಹಲವು ಬಗೆಯ ಸಂಗ್ರಹಗಳು ಇದ್ದು, ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರದರ್ಶಿಸಿದ್ದಾರೆ, ಪ್ರದರ್ಶನಗಳಿಗೆ ಅನುಕೂಲವಾಗುವಂತೆ ಪ್ರತ್ಯೇಕ ಸ್ಟ್ಯಾಂಡ್ ರಚಿಸಿದ್ದಾರೆ ಅಳ್ವಾಸ್ ನುಡಿಸಿರಿ ಯಂತಹ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಪ್ರಸ್ತುತ ಕಿನ್ನಿಗೋಳಿಯ ಅನಂತ ಪ್ರಕಾಶ ಬೆಳ್ಳಿ ಹಬ್ಬದ ಸಂಭ್ರಮದ ಕಾರ್ಯಕ್ರಮದಲ್ಲಿ ತಮ್ಮ ವಸ್ತುಗಳ ಪ್ರದರ್ಶನ ನೀಡುತ್ತಿದ್ದಾರೆ
Kshetra Samachara
28/08/2022 06:02 pm