ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ : ಆಡಳಿತಾತ್ಮಕ ಹುದ್ದೆಗಳನ್ನು ಆಯ್ಕೆ ಮಾಡುವಲ್ಲಿ ಅವಿಭಜಿತ ಕರಾವಳಿ ಜಿಲ್ಲೆಗಳು ವಿಫಲವಾಗಿವೆ; ಎ.ಸಿ.ಕುಂದರ್

ಕುಂದಾಪುರ : ಕೇವಲ ಡಾಕ್ಟರ್, ಇಂಜಿನಿಯರ್, ಸಿ.ಎ ಕ್ಷೇತ್ರಗಳಲ್ಲಿ ಆಸಕ್ತಿ ತೋರಿಸುವ ಉಡುಪಿ ದಕ್ಷಿಣ ಕನ್ನಡ ಜಿಲ್ಲೆಗಳ ಯುವ ಶಕ್ತಿ ಆಡಳಿತಾಕ್ಮಕ ಹುದ್ದೆಗಳಿಗೆ ಆಸಕ್ತಿ ತೋರಿಸದೇ ಇರುವುದು ಬೇಸರದ ವಿಷಯ. ಈ ನಿಟ್ಟಿನಲ್ಲಿ ವಿ ಶೈನ್ ಸಂಸ್ಥೆ ಉಚಿತವಾಗಿ ತರಬೇತಿಗಳನ್ನು ಹಮ್ನಿಕೊಳ್ಳುತ್ತಿರುವುದು ಶ್ಲಾಘನೀಯ ಎಂದು ಉದ್ಯಮಿ, ದಾನಿ ಆನಂದ್ ಸಿ ಕುಂದರ್ ಹೇಳಿದರು.

ಅವರು ಕೋಟದ ಪ್ರಸಿದ್ಧ ಕೋಚಿಂಗ್ ಸೆಂಟರ್ "ವಿ - ಶೈನ್" ವತಿಯಿಂದ ಅಕ್ಟೋಬರ್ 2ರಂದು ಕೋಟ ವಿವೇಕ ಹೈಸ್ಕೂಲ್ ನ ಮಹಾತ್ಮಾಗಾಂಧೀ ಮೆಮೋರಿಯಲ್ ಹಾಲ್ ನಲ್ಲಿ ಆಯೋಜಿಸಲಾದ ಮೀಸಲು ಸಶಸ್ತ್ರ ಪೇದೆಗಳ ಮತ್ತು ಅಗ್ನಿವೀರರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಯುವಶಕ್ತಿಯೇ ದೇಶದ ಶಕ್ತಿ.‌ಆದರೆ ಯುವಕರು ಅವಕಾಶಗಳನ್ನು ಸಿಕ್ಕಾಗ ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು. ಯುವಶಕ್ತಿ ದೇಶಭಕ್ತಿಯ ಜೊತೆಗೆ ಅಭಿವೃದ್ದಿಯತ್ತ ಕೈಜೋಡಿಸಬೇಕು ಎಂದು ಕರೆನೀಡಿದರು.

ಇದೇ ಸಂದರ್ಭ ರಿಸರ್ವ ಪೊಲೀಸ್ ಕಾನ್ಸ್ಟೇಬಲ್ ಮತ್ತು ಅಗ್ನಿಪಥ್ ಕಾರ್ಯಕ್ರಮದ ಅಗ್ನಿವೀರರಿಗೆ ತರಬೇತಿದಾರರಾಗಿರುವ ನಿವೃತ್ತ ಯೋಧ ರವಿ ಶೆಟ್ಟಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.

ವಿ ಶೈನ್ ಮುಖ್ಯಸ್ಥ ಹರೀಶ್ ಕುಮಾರ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿ, ಕಳೆದ 20ವರ್ಷಗಳಿಂದ ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ಸೂಕ್ತ ತರಬೇತಿ ಕೊರತೆಯಿರುವುದನ್ನು ಮನಗಂಡು ವಿ ಶೈನ್ ಕಳೆದ 5 ವರ್ಷಗಳಿಂದ ವಿವಿಧ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯನ್ನು ಉಚಿತವಾಗಿ ನೀಡುತ್ತಾ ಬಂದಿದ್ದು, ಸುಮಾರು 100ಕ್ಕೂ ಹೆಚ್ಚು ವಿದ್ಯಾರ್ಥಿಗಳು‌ ವಿವಿಧ ಸರ್ಕಾರಿ ಹುದ್ದೆಗಳನ್ನು ಪಡೆಯಲು ಸಾಧ್ಯವಾಗಿದೆ. 2016ರಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಗಳ ತರಬೇತಿ ಪಡೆದು 15ಕ್ಕೂ ಮಿಕ್ಕಿದ ಅಭ್ಯರ್ಥಿಗಳು ಉದ್ಯೋಗ ಪಡೆಯುವುದು ಸಾಧ್ಯವಾಗಿದೆ ಎಂದರು.

ಪಂಚಾಯತ್ ಅಭಿವೃದ್ದಿ ಅಧಿಕಾರಿ ವಿವೇಕ್ ವಂದಿಸಿದರು. ನರೇಂದ್ರ ಕುಮಾರ್ ಕೋಟ ನಿರೂಪಿಸಿದರು.

Edited By : Somashekar
Kshetra Samachara

Kshetra Samachara

02/10/2022 04:17 pm

Cinque Terre

17.57 K

Cinque Terre

0

ಸಂಬಂಧಿತ ಸುದ್ದಿ