ಬೈಂದೂರು: ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನ ನಡೆಯುತ್ತಿದೆ. ಜಿಲ್ಲೆಯಾದ್ಯಂತ ವಿಶೇಷ ಕಾರ್ಯಕ್ರಮಗಳು ಆಯೋಜನೆಗೊಂಡಿವೆ. ಕೆಲವು ಕಡೆ ವಿಶೇಷ ಕಾರಣಗಳಿಗಾಗಿ ಅಮೃತ ಮಹೋತ್ವಗಳು ಗಮನ ಸೆಳೆಯುತ್ತಿವೆ. ವಿಶೇಷವಾಗಿ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಸರಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲೆ ವಿಭಾಗ ಉಪ್ಪುಂದದ ವಿದ್ಯಾರ್ಥಿಗಳು ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿದರು.
ಕೇಸರಿ ಬಿಳಿ ಮತ್ತು ಹಸಿರು ಬಣ್ಣದ ಉಡುಗೆ ತೊಟ್ಟ ವಿದ್ಯಾರ್ಥಿಗಳು ಮೂರು ಬಣ್ಣಗಳನ್ನು ಪ್ರತಿನಿಧಿಸಿದರೆ, ಮಧ್ಯೆ ನೀಲಿ ಬಣ್ಣದ ಪೊಷಾಕಿನ ವಿದ್ಯಾರ್ಥಿಗಳು ಅಶೋಕ ಕಲ್ಪನೆಯನ್ನು ಸಾದರಪಡಿಸಿದರು. ಈ ಮೂಲಕ 75 ವರ್ಷಗಳ ಸ್ವಾತಂತ್ರ್ಯ ಸಂಭ್ರಮವನ್ನು ಸಾರುವ ಮಾದರಿಯನ್ನು ಈ ಸಂದರ್ಭ ಪ್ರದರ್ಶಿಸಿದರು.
Kshetra Samachara
13/08/2022 06:34 pm