ಉಡುಪಿ: ಉಡುಪಿ ಜಿಲ್ಲೆಗೆ ಇತ್ತೀಚೆಗೆ ಅಪರ ಜಿಲ್ಲಾಧಿಕಾರಿಯಾಗಿ ಬಂದವರು ವೀಣಾ ಬಿ.ಎನ್. ಇವತ್ತು ಇವರ ಮನೆಗೆ ಹೋದವರಿಗೊಂದು ಅಚ್ಚರಿ ಕಾದಿತ್ತು. ತಮ್ಮ ಮನೆಯ ಮುಂಭಾಗ ಹರ್ ಘರ್ ತಿರಂಗಾ ಅಭಿಯಾನವನ್ನು ತುಂಬ ವೈಶಿಷ್ಟ್ಯಪೂರ್ಣವಾಗಿ ಪ್ರಾರಂಭಿಸಿದ್ದರು. ಮನೆಯ ಎದುರು ಕಪ್ಪೆಚಿಪ್ಪುಗಳ ಮೂಲಕ ಭಾರತ ಭೂ ಪಟವನ್ನು ರಚಿಸಿ, ಅದರಲ್ಲಿ ತ್ರಿವರ್ಣ ಧ್ವಜ ಹಾರಿಸಿದ್ದಾರೆ. ಕಪ್ಪೆಚಿಪ್ಪು ಜೊತೆಗೆ ಸ್ಥಳೀಯವಾಗಿ ಸಿಗುವ ನೈಸರ್ಗಿಕ ವಸ್ತುಗಳನ್ನು ಬಳಸಿ, ಅತ್ಯಂತ ವಿಶಿಷ್ಟ , ಆಕರ್ಷಕ ಮತ್ತು ಎಲ್ಲರಿಗೂ ಮಾದರಿಯಾಗುವಂತೆ ಹರ್ ಘರ್ ತಿರಂಗಾ ಕಾರ್ಯಕ್ರಮ ವನ್ನು ಅರ್ಥಪೂರ್ಣವಾಗಿ ಆಚರಿಸಿ ಗಮನ ಸೆಳೆದಿದ್ದಾರೆ.
Kshetra Samachara
13/08/2022 05:42 pm