ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: ರಂಗೋಲಿಗೆ ಜೀವ ತುಂಬುತ್ತಾರೆ ಕಲಾವಿದೆ ಡಾ.ಭಾರತಿ ಮರವಂತೆ!

ಮರವಂತೆ: ಬಹುತೇಕ ಎಲ್ಲರ ಮನೆ ಮುಂದೆಯೂ ರಂಗೋಲಿ ಕಾಣಸಿಗುತ್ತದೆ.ಪ್ರತಿ ಮನೆಯ ಮಹಿಳೆಯೂ ರಂಗೋಲಿ‌ ಕಲಾವಿದೆಯೇ.ಆದರೆ ರಂಗವಲ್ಲಿಯನ್ನು ಒಂದು ಕಲೆಯಂತೆ ಸ್ವೀಕರಿಸಿ ,ಅದರಲ್ಲೇ ಅಧ್ಯಯನ ಮಾಡಿ ಅದನ್ನೇ ಉಸಿರಾಗಿಸಿಕೊಂಡವರು ಡಾ.ಭಾರತಿ ಮರವಂತೆ.

ಹೌದು.ರಾಜ್ಯದ ಬೆರಳೆಣಿಕೆಯಷ್ಟು ಮಂದಿ ರಂಗೋಲಿ ಕಲೆಯಲ್ಲಿ ಡಾಕ್ಟರೇಟ್ ಸಾಧನೆ ಮಾಡಿದ್ದಾರೆ.ಅವರಲ್ಲಿ ಭಾರತಿ ಮರವಂತೆ ಕೂಡ ಒಬ್ವರು.

ಸದ್ಯ ಹಾವೇರಿಯಲ್ಲಿ ಉಪನ್ಯಾಸಕ ವೃತ್ತಿ ಮಾಡುತ್ತಿರುವ ಡಾ.ಭಾರತಿ ಮರವಂತೆ ,ರಂಗೋಲಿಯಲ್ಲಿ ಹತ್ತಾರು ಪ್ರಯೋಗಗಳನ್ನು ಮಾಡಿ ಸೈ ಎನಿಸಿಕೊಂಡವರು. ರಂಗೋಲಿ ಮತ್ತು ಜಾನಪದ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿರುವ ಡಾ.ಭಾರತಿ, ಉಡುಪಿ ಜಿಲ್ಲೆಯ ಪುಟ್ಟ ಗ್ರಾಮ ಮರವಂತೆಯವರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎ. ಮತ್ತು 'ಕರಾವಳಿ ಕರ್ನಾಟಕದಲ್ಲಿ ರಂಗೋಲಿ ಕಲೆ' ಮಹಾ ಪ್ರಬಂಧಕ್ಕೆ ಡಾಕ್ಟರೇಟ್ ಪಡೆದದ್ದು ಅವರ ಸಣ್ಣ ಸಾಧನೆಯೇನಲ್ಲ.

ಡಾ.ಭಾರತಿ ಮರವಂತೆಯವರ ಕೈಯಲ್ಲಿ ರೂಪುಗೊಳ್ಳುವ ರಂಗೋಲಿಗಳು ಅಕ್ಷರಶಃ ನೆಲದ ಮೇಲೆ ಅರಳುವ ಕಲಾಕೃತಿಗಳು.ರಂಗೋಲಿಗೆ ಹಚ್ಚುವ ಬಣ್ಣಕ್ಕೆ ಇವರು ಜೀವ ತುಂಬುತ್ತಾರೆ.

ಪ್ರತಿ ಘಟನಾವಳಿಗಳಿಗೂ ಇವರು ರಂಗೋಲಿ ಮೂಲಕ ಮಿಡಿಯುತ್ತಾರೆ.ಕೊರೊನಾ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗ ಮತ್ತದರ ವಿರಾಟ್ ಸ್ವರೂಪವನ್ನು ರಂಗೋಲಿಯಲ್ಲಿ ಹಿಡಿದಿಡುವ ಪ್ರಯತ್ನ‌ ಮಾಡಿದ್ದುಂಟು.ವಿವಿಧ ಘಟನಾವಳಿಗಳನ್ನು ಮತ್ತು ಸಾಧಕರುಗಳನ್ನು ರಂಗೋಲಿಯಲ್ಲಿ ಹಿಡಿದಿಟ್ಟ ಹೆಗ್ಗಳಿಕೆ ಇವರದ್ದು.

ನೀವು ನಂಬಲಿಕ್ಕಿಲ್ಲ ,ರಂಗೋಲಿ ತರಬೇತಿ ಮತ್ತು ಕಾರ್ಯಾಗಾರಗಳ ಮೂಲಕ ಇವರು ಹತ್ತು ಸಾವಿರಕ್ಕೂ ಹೆಚ್ಚು ಮಂದಿಗೆ ರಂಗೋಲಿಯ ಎಬಿಸಿಡಿ ಕಲಿತಿದ್ದಾರೆ.ಒಟ್ಟಾರೆ ಹೇಳುವುದಾದರೆ ರಂಗೋಲಿ ಕಲೆಯನ್ನೇ ಉಸಿರಾಗಿಸಿ ,ಅದರಲ್ಲೇ ಸಂಶೋಧನೆ ನಡೆಸಿ ತಮ್ಮ ಹೆಸರಿನ ಮುಂದೆ "ಡಾ."ಎಂಬ ವಿಶೇಷಣ ತಂದುಕೊಂಡಿದ್ದಾರೆ.ಸಾಕಷ್ಟು ಪ್ರಶಸ್ತಿ ಮತ್ತು ಗೌರವಗಳು ಇವರನ್ನು ಅರಸಿಕೊಂಡು ಬಂದಿವೆ.ಇವರ ಸಾಧನೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸೋಣ...

ವರದಿ: ರಹೀಂ ಉಜಿರೆ

Edited By : Somashekar
Kshetra Samachara

Kshetra Samachara

12/07/2022 05:56 pm

Cinque Terre

8.45 K

Cinque Terre

1

ಸಂಬಂಧಿತ ಸುದ್ದಿ