ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಾಕೃತಿ ಪ್ರದರ್ಶನ : ಸರ್ವ ಧರ್ಮೀಯರಿಂದ ಸಾಮರಸ್ಯ ಸಂದೇಶ

ಮಣಿಪಾಲ : ಮಣಿಪಾಲದ ತ್ರಿವರ್ಣ ಕಲಾ ಕೇಂದ್ರದಲ್ಲಿ ಮೂರು ದಿನಗಳ ಸ್ಪಿರಿಟ್ ಆಫ್ ಸ್ಪಿರಿಚ್ವಾಲಿಟಿ ಚಿತ್ರಕಲಾ ಪ್ರದರ್ಶನ ನಡೆಯುತ್ತಿದೆ. ಪ್ರದರ್ಶನವನ್ನು ವಿವಿಧ ಧರ್ಮಗಳ ಧರ್ಮಗುರುಗಳು ದೀಪ ಹಚ್ಚುವ ಮೂಲಕ ವಿಭಿನ್ನವಾಗಿ ಉದ್ಘಾಟಿಸಿದ್ದು ವಿಶೇಷವಾಗಿತ್ತು.

ಅಕ್ರಾಲಿಕ್ ಕ್ಯಾನ್ವಾಸ್ 13 ಕಲಾಕೃತಿಗಳು ಮತ್ತು ಗ್ಲಾಸ್ ಮಾರ್ಕಿಂಗ್ ಪೆನ್ಸಿಲ್ ನಿಂದ ರಚಿತ 8 ಕಲಾಕೃತಿಗಳು ಇಲ್ಲಿ ಪ್ರದರ್ಶನಗೊಳ್ಳುತ್ತಿವೆ. ಅರ್ಘ್ಯ, ಮೌನಂ, ಇನ್ವೊಕೇಶನ್, ಅನುಗ್ರಹ, ಸೋಲ್ ರೆಸೋನೆನ್ಸ್, ಸಪ್ಲಿಕೇಶನ್, ಕಾರ್ಣಿಕ, ವೋವ್, ದಿ ಫೈಥ್, ಯೋಗ, ಎ ನಿವ್ ಡೌನ್, ಗಾಯನ, ಔಟ್ ಆಫ್ ಫೇಮ್, ಮಂತ್ರ, ಹೋಮ, ಅಭಿಷೇಕ, ದಿ ಡಿವೈನ್ ಲೈಟ್, ಗ್ರಾಟಿಟ್ಯೂಡ್, ಪ್ರಕೃತಿ ಪೂಜಾ, ದೃಷ್ಟಿ, ಕಾಂಷನ್ಟ್ರೇಶನ್ ಎಂಬ ಕಲಾಕೃತಿಗಳಿದ್ದ ಕಲಾಸಕ್ತರನ್ನು ಸೆಳೆಯುತ್ತಿವೆ.

ಮೂಡಬಿದ್ರೆ ಜೈನ ಮಠದ ಡಾ.ಸ್ವಸ್ತಿಶ್ರೀಚಾರುಕೀರ್ತಿ ಭಟ್ಟಾರಕ ಪಂಡಿತಾ ಚಾರ್ಯವರ್ಯ ಮಹಾಸ್ವಾಮೀಜಿ, ಉಡುಪಿ ಅನಂತೇಶ್ವರ ದೇವಸ್ಥಾನ ಅರ್ಚಕ ಸಗ್ರಿ ವೇದವ್ಯಾಸ ಐತಾಳ್, ಮಲ್ಪೆ ಜಾಮೀಯ ಮಸೀದಿಯ ಧರ್ಮ ಗುರು ಮೌಲಾನ ಇಮ್ರಾನುಲ್ಲಾ ಖಾನ್ ಮನ್ಸೂರಿ, ಪೆರಂಪಳ್ಳಿ ಅವರ್ ಲೇಡಿ ಆಫ್ ಫಾತೀಮಾ ಚರ್ಚ್ನ ಪ್ರಧಾನ ಧರ್ಮಗುರು ಫಾ.ಅನಿಲ್ ಡಿಸೋಜ, ಮಣಿಪಾಲ ಗುರುದ್ವಾರ ಸಾಹಿಬ್ ಆರಾಧಕ ಗಿಯಾನಿ ಬಲರಾಜ್ ಸಿಂಫ್ ಜೀ ಪ್ರದರ್ಶನವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ತ್ರಿವರ್ಣ ಕಲಾಕೇಂದ್ರದ ಹರೀಶ್ ಸಾಗಾ ಈ ಪ್ರದರ್ಶನವನ್ನು ಆಯೋಜನೆ ಮಾಡಿದ್ದಾರೆ.

Edited By : Somashekar
Kshetra Samachara

Kshetra Samachara

11/07/2022 04:28 pm

Cinque Terre

7.02 K

Cinque Terre

0