ಉಡುಪಿ: ಉಡುಪಿಯ ಹಿರಿಯ ಯಕ್ಷಗಾನ ಕಲಾವಿದರೊಬ್ಬರು ಲಕ್ಷಾಂತರ ಮೌಲ್ಯದ 50 ಸೆಂಟ್ಸ್ ಭೂಮಿಯನ್ನು, ಸ್ವಾತಂತ್ರ್ಯ ಅಮೃತ ಮಹೋತ್ಸವ ನೆನಪಿಗಾಗಿ ಯಕ್ಷಗಾನ ಕಲಾವಿದರಿಗಾಗಿ ದಾನ ಮಾಡಿದ್ದಾರೆ.
ಉಡುಪಿಯ ಹಿರಿಯ ಸ್ವಾತಂತ್ರ್ಯ ಯೋಧ, ಖ್ಯಾತ ಯಕ್ಷಗಾನ ಕಲಾವಿದ ಮಲ್ಪೆ ಶಂಕರನಾರಾಯಣ ಅವರಿಗೆ ಯೋಧ ಎಂಬ ನೆಲೆಯಲ್ಲಿ ಉಡುಪಿಯ ಕೊಡವೂರಿನ ಲಕ್ಷ್ಮೀನಗರದಲ್ಲಿ 50 ಸೆಂಟ್ಸ್ ಜಾಗ ದೊರಕಿತ್ತು.
ತಂದೆಯಿಂದ ಬಂದ ಭೂಮಿಯನ್ನು ಎಂ.ಎಲ್. ಸಾಮಗ ಅವರು ಯಕ್ಷಗಾನ ಕಲಾವಿದರ ಶ್ರೇಯೋಭಿವೃದ್ಧಿಗಾಗಿ ಸೇವೆ ಸಲ್ಲಿಸುತ್ತಿರುವ ಯಕ್ಷಧ್ರುವ ಪಟ್ಲ ಫೌಂಡೇಶನ್‌ಗೆ ನೀಡಿದ್ದಾರೆ. ಜಾಗದ ಪತ್ರವನ್ನು ಸ್ವೀಕರಿಸಿದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಸ್ಥಾಪಕ ಅಧ್ಯಕ್ಷ ಸತೀಶ್ ಶೆಟ್ಟಿ ಪಟ್ಲ ಅವರು ಈ ಭೂಮಿಯನ್ನು ಯಕ್ಷಗಾನ ಕಲಾವಿದರಿಗೆ ಮನೆ ಕಟ್ಟಿ ಕೊಡಲು ಬಳಸಲಾಗುವುದು ಎಂದು ಹೇಳಿದ್ದಾರೆ.
Kshetra Samachara
23/06/2022 04:07 pm