ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಯಕ್ಷಗಾನದಲ್ಲಿ ಏಕವ್ಯಕ್ತಿ ಹಾಸ್ಯ!: ಹೊಸ ಪ್ರಯೋಗದತ್ತ ಹೆಜ್ಜೆ ಹಾಕಿದ ಕ್ಯಾದಿಗೆ ಮಹಾಬಲೇಶ್ವರ ಭಟ್

ಉಡುಪಿ: ಕರಾವಳಿಯ ಗಂಡುಕಲೆ ಯಕ್ಷಗಾನ ತಿಳಿದಷ್ಟು ತಿಳಿಯುವ ಆಳ ಜ್ಞಾನದ ಕೋಟೆ. ಸಾಹಿತ್ಯ-ಸಾಂಸ್ಕೃತಿಕ ಭಕ್ತಿಭಾವ ಒಳಗೊಂಡಂತಹ ಕರಾವಳಿಯ ಅದ್ಭುತ ಭಕ್ತಿಪ್ರಧಾನ ಕಲೆಯೆಂದರೆ ಅದು ಈ ಯಕ್ಷಗಾನ. ಅನೇಕ ಕಲಾವಿದರು ಇದನ್ನೇ ನಂಬಿ ತಮ್ಮ ಜೀವನ ಸಾಗಿಸುತ್ತಾರೆ. ಇದನ್ನೇ ನಂಬಿಕೊಂಡಿರುವ ಹಲವು ಕಲಾವಿದರು ಹೊಸ ಹೊಸ ಪ್ರಯೋಗಗಳನ್ನು ಯಕ್ಷಗಾನದಲ್ಲಿ ತಂದಿದ್ದುಂಟು. ಇದೀಗ ಯಕ್ಷ ರಂಗಸ್ಥಳದಲ್ಲಿ ಚಿರಪರಿಚಿತ ಹಾಸ್ಯದ ಬುತ್ತಿ ಕ್ಯಾದಿಗೆ ಮಹಾಬಲೇಶ್ವರ ಭಟ್ ಹೊಸ ಪ್ರಯೋಗವೊಂದಕ್ಜೆ ಕೈಹಾಕಿದ್ದಾರೆ. ಏಕವ್ಯಕ್ತಿ ಹಾಸ್ಯ ಯಕ್ಷಗಾನವನ್ನು ಪ್ರಾಯೋಗಿಕವಾಗಿ ಪ್ರಯೋಗ ರೂಪದಲ್ಲಿ ಹೊರಹಾಕಿ ಸೈ ಎನಿಸಿಕೊಂಡಿದ್ದಾರೆ. ತಾನು ಮಾಡಿದ ಈ ಹೊಸ ಪ್ರಯೋಗವನ್ನು ವಿಮರ್ಶೆ ಮಾಡಲು ಒಂದಿಷ್ಟು ಯಕ್ಷ ರಸಿಕರು ಹಾಗೂ ಯಕ್ಷಗಾನದ ಜ್ಞಾನ ಉಳ್ಳವರನ್ನು ಕರೆಸಿ ಈ ಪ್ರಯೋಗ ಮಾಡಿ ಇದೀಗ ಎಲ್ಲರ ಮನ ಮುಟ್ಟಿದ್ದಾರೆ. ಪ್ರಾರಂಭದಲ್ಲಿ ಇದೊಂದು ಹೊಸತನ ಎನಿಸಿದರೂ ಕೂಡ ಹಾಸ್ಯದಲ್ಲಿ ಇನ್ನಷ್ಟು ಹೆಚ್ಚು ನಿರೀಕ್ಷೆ ಅಭಿಮಾನಿಗಳಿಗೆ ಇತ್ತು.

ಉಡುಪಿ ಜಿಲ್ಲೆಯ ಕುಂಭಾಶಿಯ ಗೋಪಾಡಿ ಬಾಲಗೋಪಾಲ ಶಿಶುಮಂದಿರದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಇದರಲ್ಲಿ ಗಾನ ಸಾರಥ್ಯವಾಗಿ ರಾಘವೇಂದ್ರ ಮಯ್ಯ ಹಾಲಾಡಿ ಹಾಗೂ ಗೀತ ಸಾಹಿತ್ಯ ನೀಡಿದವರು ದೇವದಾಸ್ ಈಶ್ವರಮಂಗಲ ಹಾಗೂ ರಂಗ ತಂತ್ರ ನಿರ್ವಹಿಸಿದರು ಚಿದಂಬರ ರಾವ್ ಜಂಬೆ, ಸಾಥ್ ಕೊಟ್ಟವರು ಅಶೋಕ್ ಭಟ್ ಸಿದ್ದಾಪುರ, ಮನು ಹಂದಾಡಿ, ಶಶಾಂಕ್ ಆಚಾರ್ಯ ಕಿರಿಮಂಜೇಶ್ವರ, ರಾಕೇಶ ಮಲ್ಯಾಡಿ, ವಿದ್ವಾನ್ ಉಮಾಕಾಂತ ಭಟ್ ಮೇಲುಕೋಟೆ ಅವರ ಮಾರ್ಗದರ್ಶನ ಪಡೆದ ಕ್ಯಾದಗಿ ಯಕ್ಷರಂಗದಲ್ಲಿ ಒಬ್ಬ ಭರವಸೆಯ ಹಾಸ್ಯಕಲಾವಿದ, ಹೊಸತನದ ಆಲೋಚನೆಯನ್ನು ಪ್ರಯೋಗ ರೂಪಕ್ಕೆ ತರುವಂತಹ ಈ ಕಲಾವಿದನ ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಶಿರಸಿ.

- ಸಂದೇಶ್ ಶೆಟ್ಟಿ ಆಜ್ರಿ ಪಬ್ಲಿಕ್ ನೆಕ್ಸ್ಟ್ ಉಡುಪಿ.

Edited By : Manjunath H D
Kshetra Samachara

Kshetra Samachara

28/10/2020 09:27 am

Cinque Terre

23.36 K

Cinque Terre

4

ಸಂಬಂಧಿತ ಸುದ್ದಿ