ಕುಂದಾಪುರ: ಖಾಸಗಿ ವಾಹಿನಿಯೊಂದು ಯಕ್ಷಗಾನಕ್ಕೆ ಅವಮಾನ ಮಾಡಿದೆ ಎಂಬ ಆರೋಪ ಕೇಳಿ ಬಂದಿದ್ದು
ಕರಾವಳಿಯಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಗೊಂಡಿದೆ.ಪ್ರಖ್ಯಾತ ಡ್ಯಾನ್ಸ್ ಶೋವೊಂದರಲ್ಲಿ ಯಕ್ಷಗಾನಕ್ಕೆ ಅವಮಾನವಾಗಿದ್ದು, ಯಕ್ಷಗಾನವನ್ನು ಅಶ್ಲೀಲವಾಗಿ ಬಿಂಬಿಸಲಾಗಿದೆ ಅನ್ನೋದು ಯಕ್ಷಪ್ರೇಮಿಗಳ ಆರೋಪವಾಗಿದೆ.
ರಾವಳಿ ಭಾಗದಲ್ಲಿ ದೇವರ ಆರಾಧನೆಯ ಭಾಗವಾಗಿ ನಡೆಯುವ ಯಕ್ಷಗಾನದ ಬಗ್ಗೆ ಖಾಸಗಿ ವಾಹಿನಿ ವಿಕೃತಿ ಮೆರೆದಿದೆ.ಯಕ್ಷಗಾನದ ವೇಷ ಧರಿಸಿ ಅಶ್ಲೀಲ ನೃತ್ಯ ಮಾಡಲಾಗಿದೆ.ಯಾವುದೇ ಖಾಸಗಿ ವಾಹಿನಿಯಲ್ಲೂ ಯಕ್ಷಗಾನಕ್ಕೆ ಅವಮಾನವಾಗಬಾರದು,
ಈ ಬಗ್ಗೆ ಪರೀಕ್ಷಿಸಲು ಸಮಿತಿ ರಚನೆ ಮಾಡಬೇಕು ಎಂದು ಕನ್ನಡ ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಗೆ ಯಕ್ಷಗಾನ ಅಭಿಮಾನಿಗಳು ದೂರು ನೀಡಿದ್ದಾರೆ.ಮಾತ್ರವಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಖಾಸಗಿ ವಾಹಿನಿ ವಿರುದ್ಧ ಅಭಿಯಾನ ಆರಂಭಿಸಿದ್ದಾರೆ.
PublicNext
26/07/2022 02:13 pm