ಉಡುಪಿ; ದಕ್ಷಿಣ ಭಾರತದ ಖ್ಯಾತ ನಟಿ ಪೂಜಾ ಹೆಗ್ಡೆ, ಮೂಲತಃ ಉಡುಪಿ ಜಿಲ್ಲೆಯವರು. ಹುಟ್ಟಿ ಬೆಳೆದದ್ದು ಮುಂಬೈನಲ್ಲಾದರೂ
ತುಳು ಭಾಷೆಯನ್ನು ಚೆನ್ನಾಗಿ ಮಾತಾಡುತ್ತಾರೆ. ಇತ್ತೀಚೆಗೆ ನಡೆದ ಅವಾರ್ಡ್ ಕಾರ್ಯಕ್ರಮವೊಂದರಲ್ಲಿ ಪೂಜಾ ತಮ್ಮ ತುಳು ಭಾಷಾ ಪ್ರೇಮ ಮೆರೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರೀ ವೈರಲ್ ಆಗಿದೆ.
ಹೌದು, ಕಾರ್ಯಕ್ರಮವೊಂದರಲ್ಲಿ ಪೂಜಾ ಹೆಗ್ಡೆಯವರನ್ನು, ನಿರೂಪಕಿ ಕಾವ್ಯ, "ಎಂಚ ಉಲ್ಲರ್" ಎಂದು ಕೇಳಿದಾಗ "ಯಾನ್ ಉಷಾರ್ ಉಲ್ಲೆ, ಈರ್ ಎಂಚ ಉಲ್ಲರ್" ಎಂದು ಕೇಳಿದ್ರು, ಆಗ ನಿರೂಪಕಿ ಕಾವ್ಯ "ಎಂಕ್ ತುಳು ಬರ್ಪುಜಿ" ಎಂದು ಹೇಳಿದಾಗ, ನಟಿ ಪೂಜಾ ಹೆಗ್ಡೆ " ಎಂಕ್ ತುಳು ಬರ್ಪುಂಡು, ಕನ್ನಡ ಬರ್ಪುಜಿ" ಅಂತ ಹೇಳಿದ್ದಾರೆ. ಸದ್ಯ ಈ ವಿಡಿಯೋ ತುಣುಕು ಕರಾವಳಿಯಲ್ಲಿ ವೈರಲ್ ಆಗುತ್ತಿದ್ದು ಪೂಜಾ ಹೆಗ್ಡೆ ಅವರ ಮಾತೃ ಭಾಷಾ ಪ್ರೀತಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
PublicNext
14/09/2022 06:20 pm