ಮಂಗಳೂರು: ಕೊರೊನಾ ಕಾರಣದಿಂದ ಬಾಧಿತವಾಗಿದ್ದ ತುಳು ಚಿತ್ರರಂಗ ಇದೀಗ ಮತ್ತೆ ತನ್ನ ಸಿನೆಮಾಗಳನ್ನ ಬಿಡುಗಡೆಗೊಳಿಸಲು ಕಾತರವಾಗಿದೆ. ಬಹುನಿರೀಕ್ಷಿತ 'ಪೆಪ್ಪೆರೆರೆ ಪೆರೆರೆರೆ' ಸಿನೆಮಾ ಮುಂದಿನ ಡಿಸೆಂಬರ್ 18 ರಂದು ಒಟಿಟಿ ಪ್ಲ್ಯಾಟ್ ಫಾರಂ ಮೂಲಕ ಜಗತ್ತಿನಾದ್ಯಂತ ತೆರೆ ಬಿಡುಗಡೆಯಾಗುತ್ತಿರುವ ಮೊದಲ ತುಳು ಸಿನೆಮಾ ಅನ್ನೋ ಹೆಸರು 'ಪೆಪ್ಪೆರೆರೆ ಪೆರೆರೆರೆ' ಪಾಲಾಗಲಿದೆ.
ಇದರ ಹೆಸರೇ ಸೂಚಿಸುವಂತೆ ಇದೊಂದು ವಾದ್ಯದಿಂದ ಹೊರಡಬಲ್ಲ ನಾದವಾಗಿದ್ದು, ಚಿತ್ರದ ಕಥೆ ಅದ್ಯಾವ ರೀತಿ ಸಾಗಲಿದೆ ಅನ್ನೋ ಕುತೂಹಲ ಹೆಚ್ಚಿಸಿದೆ.
ನಾಲ್ಕು ವರುಷಗಳ ಹಿಂದೆ ಏಸ ಹೆಸರಿನ ಸಿನೆಮಾಕ್ಕೆ ಕಥೆ, ಸಂಭಾಷಣೆ ಬರೆಯುವ ಮೂಲಕ ಇಂದಿಗೂ ಸಿನೆಮಾದ ಕಾಮೆಡಿ ಸೀಕ್ವೆನ್ಸಿ ಜನರ ಮನಸ್ಸಲ್ಲಿ ಉಳಿಯುವಂತೆ ಮಾಡಿದ್ದ ಶೋಭರಾಜ್ ಪಾವೂರ್ 'ಪೆಪ್ಪೆರೆರೆ ಪೆರೆರೆರೆ' ಸಿನೆಮಾವನ್ನ ನಿರ್ದೇಶಿಸಿದ್ದಾರೆ. ಈಗಾಗಲೇ ಸಿನೆಮಾದ ಟ್ರೈಲರ್ ಗಳು ಹಾಗೂ ಉಮೇಶ್ ಮಿಜಾರ್ ವಿರಚಿತ 'ಅತಳ ವಿತಳ ಶೂರ', ಶಮೀರ್ ಮುಡಿಪು ಹಾಡಿರುವ 'ಕಥೆಯೊಂಜಿ ಮೋಕೆದ' ಹಾಡು ವೀಕ್ಷಿಸಿದ ಲಕ್ಷಾಂತರ ಮಂದಿ ಯೂಟ್ಯೂಬ್ ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನು ಸಿನೆಮಾದ ಟಿಕೆಟ್ ಗಳು ಮುಂಚಿತವಾಗಿ ಆನ್ ಲೈನ್ ಮೂಲಕ ಟಿಕೆಟ್ ಖರೀದಿಸಬಹುದಾಗಿದೆ. ಈ ಮೂಲಕ ಜಗತ್ತಿನಾದ್ಯಂತ ಸಿನೆಮಾ ವೀಕ್ಷಿಸಲು ತುಳು ಪ್ರೇಕ್ಷಕರಿಗೆ ಸಾಧ್ಯವಾಗಲಿದೆ.
Kshetra Samachara
08/11/2020 07:20 pm