ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಮಕ್ಕಳನ್ನು ಅಂಕ ಗಳಿಸುವ ಯಂತ್ರಗಳನ್ನಾಗಿಸದೇ ಸೃಜನಶೀಲ ವ್ಯಕ್ತಿತ್ವ ರೂಪಿಸುವ ಜವಾಬ್ದಾರಿ ಶಿಕ್ಷಕರದ್ದು : ಆಶಾಜ್ಯೋತಿ ರೈ

ಕುಂದಾಪುರ: ಮಕ್ಕಳನ್ನು ಅಂಕ ಗಳಿಸುವ ಯಂತ್ರವನ್ನಾಗಿಸದೇ ಅವರ ಪ್ರತಿಭೆಗಳನ್ನು ಗುರುತಿಸಿ, ಸೃಜನಶೀಲತೆಯ ವ್ಯಕ್ತಿತ್ವ ರೂಪಿಸುವ ಜವಾಬ್ಧಾರಿ ಪ್ರತಿಯೊಬ್ಬ ಶಿಕ್ಷಕರದ್ದಾಗಬೇಕು ಎಂದು ಮಂಗಳೂರಿನ ಆಸರೆ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷೆ ಆಶಾಜ್ಯೋತಿ ರೈ ಹೇಳಿದರು.

ಭಾನುವಾರ ಕುಂದಾಪುರ ಯುವ ಬಂಟರ ಸಂಘದ ರಜತ ಸಂಭ್ರಮದ ಪ್ರಯುಕ್ತ ಆರ್.ಎನ್.ಶೆಟ್ಟಿ ಸಭಾಭವನದಲ್ಲಿ ಹಮ್ಮಿಕೊಳ್ಳಲಾದ ವಿದ್ಯಾರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ 10 ಜನ ಶಿಕ್ಷಕರಿಗೆ ಪ್ರಶಸ್ತಿ ನೀಡಿ ಅಭಿನಂದಿಸಿ ಮಾತನಾಡಿದರು.

ಪೋಷಕರಿಗೆ ಅವರ ಮಕ್ಕಳು ಮಾತ್ರ ಪೋಷಕರು. ಆದರೆ ಶಿಕ್ಷಕರಿಗೆ ಪಾಠ ಹೇಳಿಕೊಡುವ ಎಲ್ಲಾ ಮಕ್ಕಳು ಮಕ್ಕಳೇ. ಆದುದರಿಂದ ಮಕ್ಕಳ ಬಗ್ಗೆ ಶಿಕ್ಷಕರ ಜವಾಬ್ದಾರಿ ಮಹತ್ವದ್ದು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟ (ರಿ) ಮಂಗಳೂರು ಇದರ ಕೋಶಾಧಿಕಾರಿ ಉಳ್ತೂರು ಮೋಹನದಾಸ್ ಶೆಟ್ಟಿ ಮಾತನಾಡಿ, ಜಾಗತಿಕ ಬಂಟರ ಸಂಘದ ಮೂಲಕ ಯುವ ಬಂಟರ ಸಂಘದ ಸಾಧನೆಗಳಿಗೆ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಬೆಂಬಲ ನೀಡುವ ಭರವಸೆ ನೀಡಿದರು.

ಶಿಕ್ಷಕಿಯರಾದ ಡಾ. ಚಂದ್ರಾವತಿ ಶೆಟ್ಟಿ, ಚಂದ್ರಕಲಾ ಶೆಟ್ಟಿ, ಶೈಲಜಾ ವಿ ಶೆಟ್ಟಿ, ಚೈತ್ರಾ ಬಿ. ಶೆಟ್ಟಿ, ಶಿಕ್ಷಕರಾದ ಎಂ. ಸುರೇಂದ್ರ ಶೆಟ್ಟಿ, ಬಾಬು ಶೆಟ್ಟಿ, ಡಾ.ಕಿಶೋರ್ ಕುಮಾರ್ ಶೆಟ್ಟಿ, ಉದಯಕುಮಾರ್ ಶೆಟ್ಟಿ, ಸದಾರಾಮ ಶೆಟ್ಟಿ, ಕಳಿ ಆಲೂರು ಶಾಲೆಯ ಉದಯಕುಮಾರ್ ಶೆಟ್ಟಿಯವರಿಗೆ ವಿದ್ಯಾರತ್ನ ಪ್ರಶಸ್ತಿ ವಿತರಿಸಿ ಗೌರವಿಸಲಾಯಿತು.

ಯುವ ಬಂಟರ ಸಂಘದ ಅಧ್ಯಕ್ಷ ಡಾ. ಅಂಪಾರು ನಿತ್ಯಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ದಿನಕರ ಶೆಟ್ಟಿ ಹರ್ಕಾಡಿ ಸ್ವಾಗತಿಸಿದರು. ರಾಜೇಶ್ವರಿ ಆರ್. ಹೆಗ್ಡೆ ಪ್ರಾರ್ಥಿಸಿದರು. ಪ್ರತಾಪಚಂದ್ರ ಶೆಟ್ಟಿ ಪ್ರಸ್ತಾವಿಸಿದರು. ಕೋಶಾಧಿಕಾರಿ ಅಕ್ಷಯ ಹೆಗ್ಡೆ ಮೊಳಹಳ್ಳಿ ವಂದಿಸಿದರು.

Edited By : Shivu K
Kshetra Samachara

Kshetra Samachara

25/09/2022 06:59 pm

Cinque Terre

13.84 K

Cinque Terre

0

ಸಂಬಂಧಿತ ಸುದ್ದಿ