ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ: ಬ್ರಿಟಿಷರ ಕಾಲದಲ್ಲಿ ಇಲ್ಲದ ಶಿಕ್ಷಣ ತಾರತಮ್ಯ ಇಂದು ನಡೆಯುತ್ತಿದೆ; ಪ್ರೊಫೆಸರ್ ಡಾ, ನಿರಂಜನಾರಾಧ್ಯ

ಬ್ರಹ್ಮಾವರ: ಸರಕಾರಿ ಶಾಲೆಗಳನ್ನು ಕಳೆದುಕೊಂಡರೆ ಭವಿಷ್ಯ ಮತ್ತು ಭರವಸೆಯನ್ನು ಕಳೆದು ಕೊಂಡಂತೆ. ಸರಕಾರಿ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರು ಮತ್ತು ಲೋಕಸಭೆಗೆ ಆಯ್ಕೆಯಾಗುವ ಎಂಪಿಗಳಂತೆ ಜನರಿಂದ ಆಯ್ಕೆಗೊಂಡವರಾಗಿರುತ್ತಾರೆ

ಸರಕಾರಿ ಶಾಲೆಗಳು ಸಂವಿಧಾನದ ತೊಟ್ಟಿಲುಗಳು ಜೀವಿಸುವ ಹಕ್ಕಿನಲ್ಲಿ ಶಿಕ್ಷಣ ಅತೀ ಮುಖ್ಯ. ಬ್ರಿಟಿಷರ ಕಾಲದಲ್ಲಿ ಇಲ್ಲದ ಶಿಕ್ಷಣ ತಾರತಮ್ಯ ಇಂದು ನಡೆಯುತ್ತಿದೆ. ಸರಕಾರಿ ಶಾಲಾ ಶಿಕ್ಷಕರ ಮಕ್ಕಳೆ ಖಾಸಗಿ ಶಾಲೆಗೆ ಹೋಗುತ್ತಿದ್ದು ಅವರು ನೀಡುವ ಶಿಕ್ಷಣದ ಮೇಲೆ ಅವರೀಗೆ ನಂಬಿಕೆ ಇಲ್ಲವಾಗಿದೆ ಎಂದು ಪ್ರೊಫೆಸರ್ ಡಾ, ನಿರಂಜನಾರಾಧ್ಯ ಹೇಳಿದರು.

ಶುಕ್ರವಾರ ಬ್ರಹ್ಮಾವರ ಮಧರ್ ಪ್ಯಾಲೇಸ್ ಆಡಿಟೋರಿಯಂ ನಲ್ಲಿ ಜರುಗಿದ ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯ ಬ್ರಹ್ಮಾವರ ತಾಲೂಕು ಮಟ್ಟದ ಎಸ್. ಡಿ. ಎಂ.ಸಿ ಸದಸ್ಯರಿಗೆ ಸಾಮಥ್ರ್ಯವರ್ಧನ ತರಬೇತಿ ಕಾರ್ಯಾಗಾರವನ್ನು ಉಧ್ಘಾಟಿಸಿ ಅವರು ಮಾತನಾಡಿದರು.

ಎಸ್. ಡಿ. ಎಂ.ಸಿ ಸಮನ್ವಯ ವೇದಿಕೆಯ ಉಡುಪಿ ಜಿಲ್ಲಾ ಅಧ್ಯಕ್ಷ ಅಬ್ದುಲ್ ಸಲಾಂ ಚಿತ್ತೂರು, ರಾಜ್ಯ ಅಧ್ಯಕ್ಷ ಮೋಯ್ದಿನ್ ಕುಟ್ಟಿ , ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ರಂಗನಾಥ್ , ಬ್ರಹ್ಮಾವರ ತಾಲೂಕು ಅಧ್ಯಕ್ಷ ಬಾಲಕೃಷ್ಣ ಪೂಜಾರಿ ಇನ್ನಿತರು ಉಪಸ್ಥಿತರಿದ್ದರು. ಬ್ರಹ್ಮಾವರ ತಾಲೂಕಿನಲ್ಲಿ 115 ಸರಕಾರಿ ಶಾಲೆ ಇದ್ದು 2052 ಸದಸ್ಯರು, ಜಿಲ್ಲೆಯಲ್ಲಿ 11 ,160 ರಾಜ್ಯದಲ್ಲಿ ಒಟ್ಟು 8,46,800 ಎಸ್ ಡಿ ಎಂ ಸಿ ಸದಸ್ಯರು ಇದ್ದಾರೆ.

Edited By : Manjunath H D
Kshetra Samachara

Kshetra Samachara

23/09/2022 09:02 pm

Cinque Terre

16.18 K

Cinque Terre

1

ಸಂಬಂಧಿತ ಸುದ್ದಿ