ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ನಿರ್ಮಲ ಮನಸ್ಸು ಆತ್ಮಸ್ಥೈರ್ಯವನ್ನು ಹೆಚ್ಚಿಸಿ ಶಿಕ್ಷಣಕ್ಕೆ ಸಹಕಾರಿ

ಮುಲ್ಕಿ: ಶ್ರೀ ವ್ಯಾಸ ಮಹರ್ಷಿ ವಿದ್ಯಾ ಪೀಠ ಕಿಲ್ಪಾಡಿ ಹಾಗೂ ಲಯನ್ಸ್ ಕ್ಲಬ್ ಸಹಭಾಗಿತ್ವದಲ್ಲಿ 9 ನೇ ಹಾಗು 10 ನೇ ಯ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಧೈರ್ಯವಾಗಿ ಎದುರಿಸುವ ಬಗ್ಗೆ ಹಾಗೂ ವೃತ್ತಿ ಮಾರ್ಗದರ್ಶನ ಕುರಿತಾಗಿ ಕಾರ್ಯಾಗಾರ ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠದಲ್ಲಿ ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಮಂಗಳೂರು ಐ.ಐ.ಡಿ ನಿರ್ದೇಶಕ ಪ್ರೊ.ರೊನಾಲ್ಡ್ ಪಿಂಟೋ ಮಾತನಾಡಿ ವಿದ್ಯಾರ್ಥಿಗಳು ಮನಸ್ಸಿನಲ್ಲಿ ನಿರಾಳತೆಯ ಭಾವನೆಯನ್ನು ಕಾಯ್ದುಕೊಂಡು ಪರೀಕ್ಷೆಯನ್ನು ಎದುರಿಸಲು ಸಜ್ಜಾಗಬೇಕು. ನಿರ್ಮಲ ಮನಸ್ಸು ಆತ್ಮಸ್ಥೈರ್ಯವನ್ನು ಹೆಚ್ಚಿಸಿ ಸ್ಪರ್ಧಾತ್ಮಕ ರೀತಿಯಲ್ಲಿ ಶಿಕ್ಷಣಕ್ಕೆ ಸಹಕಾರಿ ಎಂದರು.

ಪ್ರಶಾಂತ್ ಶೆಟ್ಟಿ ಜೆ.ಸಿ ಮತ್ತು ಲಯನ್ಸ್ ಟ್ರೈನರ್ ಪರೀಕ್ಷೆ ಎದುರಿಸುವ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಮುಲ್ಕಿ ಲಯನ್ಸ್ ಕ್ಲಬ್ ಅಧ್ಯಕ್ಷೆ ನೀರಾಜಾಕ್ಷಿ ಅಗರ್ವಾಲ್ ಕಾರ್ಯದರ್ಶಿ ಶೀತಲ್ ಸುಶೀಲ್, ಸದಸ್ಯ ನಿತಿನ್ ಬಂಗೇರ, ಶಾಲಾ ಮುಖ್ಯೋಪಾಧ್ಯಾಯನಿ ಚಂದ್ರಿಕಾ ಎಸ್ ಭಂಡಾರಿ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

20/09/2022 05:50 pm

Cinque Terre

1.46 K

Cinque Terre

0

ಸಂಬಂಧಿತ ಸುದ್ದಿ